Connect with us

  KARNATAKA

  `ದ್ವಿತೀಯ ಪಿಯುಸಿ’ ಫಲಿತಾಂಶ ಪ್ರಕಟ : ರಾಜ್ಯಕ್ಕೆ `ವಿದ್ಯಾಲಕ್ಷ್ಮಿ’ ಪ್ರಥಮ ಸ್ಥಾನ, ದಕ್ಷಿಣ ಕನ್ನಡ ಫಸ್ಟ್, ಗದಗ ಲಾಸ್ಟ್!

  ಬೆಂಗಳೂರು, ಏಪ್ರಿಲ್ 10 : ಮಾ.1ರಿಂದ ಮಾರ್ಚ್ 22ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ಇಂದು (ಏ.10) ಪ್ರಕಟವಾಗುತ್ತದೆ. ಎಲ್ಲ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮುಕ್ತಾಯವಾದ ಹಿನ್ನೆಲೆಯಲ್ಲಿ ಇಂದು ಫಲಿತಾಂಶ ಪ್ರಕಟಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಿರ್ಧರಿಸಿದೆ. ಬೆಳಗ್ಗೆ 10 ಗಂಟೆಗೆ ಸುದ್ದಿಗೋಷ್ಠಿ ನಡೆಯಲಿದ್ದು, ಬಳಿಕ 11 ಗಂಟೆಗೆ ವೆಬ್​​ಸೈಟ್​ನಲ್ಲಿ ವಿಜ್ಞಾನ, ವಾಣಿಜ್ಯ, ಕಲೆ ವಿಭಾಗ ಸೇರಿದಂತೆ ಎಲ್ಲ ವಿಭಾಗಗಳ ಫಲಿತಾಂಶವನ್ನು ಏಕಕಾಲದಲ್ಲಿ ಪ್ರಕಟಿಸಲಾಗುತ್ತದೆ. ಬಹುನಿರೀಕ್ಷಿತ 2024 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ವಿದ್ಯಾರ್ಥಿಗಳು www.karresults.nic.in ನಲ್ಲಿ ಫಲಿತಾಂಶ ನೋಡಬಹುದು.

  ಈ ಬಾರಿ ರಾಜ್ಯದಾದ್ಯಂತ ಸುಮಾರು 1,124 ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆದಿತ್ತು. ಸುಮಾರು 6.98 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗಿಯಾಗಿದ್ದರು. ಇಂದು ಫಲಿತಾಂಶ ಪ್ರಕಟವಾಗಿದ್ದು, ಬೆಳಗ್ಗೆ11 ಗಂಟೆಗೆ ವೆಬ್ ಸೈಟ್ ನಲ್ಲಿ ವಿದ್ಯಾರ್ಥಿಗಳು ಫಲಿತಾಂಶವನ್ನು ವೀಕ್ಷಿಸಬಹುದು.

  ಮಾರ್ಚ್ 1 ರಿಂದ ಮಾರ್ಚ್ 22ರವರೆಗೆ ಪರೀಕ್ಷೆ ನಡೆದಿದ್ದು, ಈ ಬಾರಿ 81.15 ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದು, ವಾಣಿಜ್ಯ ವಿದ್ಯಾರ್ಥಿಳು 1.74,315, ಕಲಾವಿಭಾಗದಲ್ಲಿ 1,28, 448, ವಿಜ್ಞಾನ ವಿಭಾಗದಲ್ಲಿ 2,49,927 ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದಾರೆ.

  ಪಿಯುಸಿಯಲ್ಲಿ ವಿದ್ಯಾಲಕ್ಷ್ಮಿ ಪ್ರಥಮ ಸ್ಥಾನ ಪಡೆದಿದ್ದು, 600 ಕ್ಕೆ598 ಅಂಕ ಪಡೆದಿದ್ದಾರೆ, ದಕ್ಷಿಣ ಕನ್ನಡ ಪ್ರಥಮ ಸ್ಥಾನ ಪಡೆದರೆ, ಉಡುಪಿ ಎರಡನೇ ಸ್ಥಾನ, ಉತ್ತರ ಕನ್ನಡ ಜಿಲ್ಲೆಗೆ ನಾಲ್ಕನೇ ಸ್ಥಾನ, ಗದಗ ಜಿಲ್ಲೆಗೆ ಕೊನೆಯ ಕೊನೆ ಸ್ಥಾನ ದೊರೆತಿದೆ.

  ಈ ರೀತಿ ಮೊಬೈಲ್ ನಲ್ಲೇ ರಿಸಲ್ಟ್ ಚೆಕ್ ಮಾಡಿಕೊಳ್ಳಿ:

  1. ನೀವು www.karresults.nic.in ಪಿಯುಸಿಯ ಸಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  2. ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಲಿಂಕ್ ಅನ್ನು ಕ್ಲಿಕ್ ಮಾಡಿ.
  3. ಲಾಗಿನ್ ಪುಟದಲ್ಲಿ ನಿಮ್ಮ ನೋಂದಣಿ ಸಂಖ್ಯೆಯೊಂದಿಗೆ ಯಾವ ವಿಭಾಗವೆಂದು ಕ್ಲಿಕ್ ಮಾಡ್ಬೇಕು (ವಿಜ್ಞಾನ, ವಾಣಿಜ್ಯ ಮತ್ತು ಕಲೆ ಆಯ್ಕೆ ಮಾಡಿಕೊಳ್ಳಿ)
  4.  ಕ್ಲಿಕ್ ಮಾಡಿದಾಗ ನಿಮಗೆ ಫಲಿತಾಂಶವು ಸ್ಕ್ರೀನ್ ಮೇಲೆ ಕಾಣಿಸುತ್ತದೆ.
  5.  ಈಗ ನೀವು ನಿಮ್ಮ ಫಲಿತಾಂಶವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
  Share Information
  Advertisement
  Click to comment

  You must be logged in to post a comment Login

  Leave a Reply