LATEST NEWS
ಎರಡನೇ ಹಂತದ ಗ್ರಾಮ ಪಂಚಾಯತ್ ಚುನಾವಣೆಯ ಮತದಾನ ಆರಂಭ

ಉಡುಪಿ ಡಿಸೆಂಬರ್ 27: ರಾಜ್ಯದಲ್ಲಿ ಎರಡನೇ ಹಂತದಲ್ಲಿ ಪಂಚಾಯತ್ ಚುನಾವಣೆ ನಡೆಯುತ್ತಿದ್ದು ಉಡುಪಿ ಜಿಲ್ಲೆಯ ಮೂರು ತಾಲೂಕುಗಳಲ್ಲಿ ಎರಡನೇ ಹಂತದ ಗ್ರಾಮಪಂಚಾಯತ್ ಚುನಾವಣೆಯ ಮತದಾರ ಆರಂಭವಾಗಿದೆ.
ಕಾಪು, ಕುಂದಾಪುರ, ಕಾರ್ಕಳದ ತಾಲೂಕುಗಳಲ್ಲಿ ಇಂದು ಗ್ರಾ.ಪಂ ಚುನಾವಣೆ ನಡೆಯಲಿದ್ದು, ಕುಂದಾಪುರ-43, ಕಾರ್ಕಳ-27, ಕಾಪು-16 ಗ್ರಾ ಪಂಚಾಯತ್ ಗಳಿದ್ದು ಅದರಲ್ಲಿ ಕುಂದಾಪುರ-530, ಕಾರ್ಕಳ-368, ಕಾಪು-280 ಸ್ಥಾನಗಳಿಗೆ ಇಂದು ಮತದಾನ ನಡೆಯಲಿದೆ. ಇನ್ನು ಈಗಾಗಲೇ ಕುಂದಾಪುರ-24, ಕಾರ್ಕಳ-31, ಕಾಪು-10 ಸ್ಥಾನಗಳಿಗೆ ಈಗಾಗಲೇ ಅವಿರೋಧ ಆಯ್ಕೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ 606 ಮತಗಟ್ಟೆಗಳು, 4,16,550 ಮತದಾರರು ತಮ್ಮ ಮತವನ್ನು ಹಾಕಲಿದ್ದು, ಭಾನುವಾರ ಹಿನ್ನಲೆ ಬೆಳಗ್ಗಿಂದಲೇ ಬಿರುಸಿನಿಂದ ಮತದಾನ ಪ್ರಾರಂಭವಾಗಿದೆ.

ಉಡುಪಿ ಜಿಲ್ಲೆಯ ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಬೆಳ್ಳಾಲ ಮೂಡುಮುಂದ ವಾರ್ಡ್ ನಲ್ಲಿ ತಮ್ಮ ಮತ ಚಲಾಯಿಸಿದರು. ಬೆಳಗ್ಗೆ ಏಳು ಗಂಟೆಗೆ ಸರಿಯಾಗಿ ಬಂದ ಶಾಸಕ ಸುಕುಮಾರ ಶೆಟ್ಟಿ, ಮತಗಟ್ಟೆಯಲ್ಲಿ ಮೊದಲ ಓಟ್ ಮಾಡಿದರು.