Connect with us

DAKSHINA KANNADA

ಪುತ್ತೂರು ಎರಡನೇ ಬಲಿ ಪಡೆದ ಡೆಂಗ್ಯೂ….

ಪುತ್ತೂರು,ಜೂ.19: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರೊನಾ ನಡುವೆ ಈಗ ಡೆಂಗ್ಯೂ ಕಾಟ ಆರಂಭವಾಗಿದ್ದು, ಜಿಲ್ಲೆಯಲ್ಲಿ ಈಗಾಗಲೇ ಡೆಂಗ್ಯೂಗೆ ಇಬ್ಬರು ಬಲಿಯಾಗಿದ್ದಾರೆ.


ನಿನ್ನೆ ಡೆಂಗ್ಯೂ ಜ್ವರ ಬಾಧಿತ ತಾಲೂಕಿನ ಪರ್ಪುಂಜ ನಿವಾಸಿ ವಿವಾಹಿತ ಮಹಿಳೆಯೊಬ್ಬರು ತಡರಾತ್ರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಪುತ್ತೂರು ತಾಲೂಕಿನ ಪರ್ಪುಂಜ ನಿವಾಸಿ ನಝೀರ್ ಮಾಸ್ಟರ್ ಅವರ ಪತ್ನಿ ನಸೀಮಾ(32) ಮೃತಪಟ್ಟ ಮಹಿಳೆ. ನಸೀಮಾ ಕಳೆದೊಂದು ವಾರದಿಂದ ಜ್ವರದಿಂದ ಬಳಲುತ್ತಿದ್ದು ಪುತ್ತೂರಿನಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೆ ಜ್ವರ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಅವರನ್ನು ಮಂಗಳೂರು- ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿ ಆಗದೇ ಗುರುವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.
ಸದ್ಯ ಪುತ್ತೂರು ತಾಲೂಕಿನಲ್ಲಿ ಡೆಂಗಿ ಜ್ವರಕ್ಕೆ ಬಲಿಯಾದ ಎರಡನೆ ಪ್ರಕರಣ ಇದಾಗಿದ್ದು, ವಾರದ ಹಿಂದೆ ಬೆಟ್ಟಂಪಾಡಿಯಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದರು.

Facebook Comments

comments