LATEST NEWS
ಕೊಚ್ಚಿ ವಾಟರ್ ಮೆಟ್ರೋ ಟರ್ಮಿನಲ್ ನಲ್ಲಿ ಭೂತಾಯಿ ಮೀನಿನ ಮಳೆ.. ವಿಡಿಯೋ ವೈರಲ್

ಕೊಚ್ಚಿನ್ ಮೇ 02: ಕೇರಳದ ಕೊಚ್ಚಿನ್ ವಾಟರ್ ಟರ್ಮಿನಲ್ ನಲ್ಲಿ ಬೂತಾಯಿ ಮೀನುಗಳು ನೀರಿನಿಂದ ಮೇಲೆ ಹಾರಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬರು ಈ ವಿಡಿಯೋ ಅನ್ನು ಪೋಸ್ಟ್ ಮಾಡಿದ್ದು ಸದ್ಯ ವೈರಲ್ ಆಗಿದೆ. ಇತ್ತೀಚೆಗಷ್ಟೇ ಉದ್ಘಾಟನೆಗೊಂಡಿದ್ದ ಕೊಚ್ಚಿ ವಾಟರ್ ಮೆಟ್ರೋ ಟರ್ಮಿನಲ್‌ನಲ್ಲಿ ಈ ಘಟನೆ ನಡೆದಿದ್ದು, ಭೂತಾಯಿ ಮೀನಿನ ರಾಶಿಯೇ ನೀರಿನಿಂದ ಗಾಳಿಯಲ್ಲಿ ಹಾರಾಡುತ್ತಿರುವ ದೃಶ್ಯ ಕಾಣ ಸಿಕ್ಕಿದೆ. ಸಣ್ಣ ಪ್ರಮಾಣದಲ್ಲಿ ನೀರಿನಿಂದ ಮೀನುಗಳು ಜಿಗಿಯುವುದು ಸಾಮಾನ್ಯ ದೃಶ್ಯವಾಗಿದೆ, ಆದರೆ ವೈರಲ್ ವೀಡಿಯೊದಲ್ಲಿ ಸಾವಿರಾರು ಮೀನುಗಳು ಜಿಗಿಯುವುದನ್ನು ನೋಡಬಹುದಾಗಿದೆ. ಕೆಲವು ಮೀನನ್ನು ಹಿಡಿದುಕೊಂಡು ಹೋಗುತ್ತಿದ್ದಾರೆ.
