Connect with us

BELTHANGADI

ಸ್ಕೂಟಿ ಲಾರಿ ನಡುವೆ ಅಪಘಾತ – ಸ್ಕೂಟಿ ಚಾಲಕ ಸಾವು

ಬೆಳ್ತಂಗಡಿ, ಸೆಪ್ಟೆಂಬರ್ 13 : ಬೆಳ್ತಂಗಡಿಯ ಪಡಂಗಡಿ ಗ್ರಾಮದ ಬದ್ಯಾರು ಎಂಬಲ್ಲಿ ಲಾರಿ ಹಾಗೂ ಸ್ಕೂಟಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಸ್ಕೂಟಿ ಚಾಲಕ ಸಾವನ್ನಪ್ಪಿದ ಘಟನೆ ನಡೆದಿದೆ.


ಮೃತ ಸ್ಕೂಟಿ ಚಾಲಕನನ್ನು ಗರ್ಡಾಡಿ ನಿವಾಸಿ ಗಿರೀಶ್‌ ಮೂಲ್ಯ ಎಂದು ಗುರುತಿಸಲಾಗಿದೆ. ಲಾರಿಯು ಅಳದಂಗಡಿ ಕಡೆಯಿಂದ ಬರುತ್ತಿದ್ದ ಸಂದರ್ಭದಲ್ಲಿ ಸ್ಕೂಟಿ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದ ಸ್ಕೂಟಿ ಚಾಲಕ ಲಾರಿಯ ಅಡಿಗೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

Facebook Comments

comments