Connect with us

UDUPI

ಕಾರ್ಕಳ: ಪ್ರಿಯಕರನೊಂದಿಗೆ ನಾಪತ್ತೆಯಾಗಿದ್ದಾಕೆ ತಮಿಳುನಾಡಿನಲ್ಲಿ ಪತ್ತೆ

ಕಾರ್ಕಳ ಸೆಪ್ಟೆಂಬರ್ 13: ಕಾರ್ಕಳ ತಾಲೂಕಿನ ಮಾಳದ ಆಹಾರ ಉತ್ಪಾದನಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಾಳ ಗ್ರಾಮದ ಯುವತಿ ಸೆಪ್ಟೆಂಬರ 2 ರಂದು ನಾಪತ್ತೆಯಾಗಿದ್ದಳು. ಈ ಕುರಿತಂತೆ ಪೋಷಕರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದರು.


ಇದೀಗ ನಾಪತ್ತೆಯಾಗಿದ್ದ ಯುವತಿ ತನ್ನ ಪ್ರಿಯಕರನಾಗಿರುವ ಅಸ್ಸಾಂ ಮೂಲದ ಭುವನ ಎಂಬಾತನೊಂದಿಗೆ ತಮಿಳುನಾಡಿನ ಕೃಷ್ಣಗಿರಿ ಎಂಬಲ್ಲಿ ಪತ್ತೆಯಾಗಿದ್ದಾಳೆ. ಅವರಿಬ್ಬರನ್ನು ಕಾರ್ಕಳ ಗ್ರಾಮಾಂತರ ಠಾಣಾಧಿಕಾರಿ ನಜೀರ್ ಹುಸೈನ್ ನೇತೃತ್ವದಲ್ಲಿ ಪೊಲೀಸರ ತಂಡವು ಕಾರ್ಕಳಕ್ಕೆ ಕರೆತರಲಾಗುತ್ತಿದೆ.

ನಲ್ಲೂರು ಗ್ರಾಮದ ಬಾಹುಬಲಿ ಸ್ವೀಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಸಪ್ಪೆಂಬರ್ 2 ರಂದು ನಾಪತ್ತೆಯಾಗಿದ್ದಳು. ಆಕೆಗೆ ಸ್ವಜಾತಿಯ ಯುವಕನೊಂದಿಗೆ ವಿವಾಹ ನಿಶ್ಚಿತವಾಗಿತ್ತು. ಆ ಯುವಕನೊಂದಿಗೆ ವಿವಾಹವಾಗಲು ಆಕೆಗೆ ಇಷ್ಟವಿರಲಿಲ್ಲ. ಈ ಕುರಿತು ಆಕೆ ತನ್ನ ತಂಗಿಗೆ ಕರೆ ಮಾಡಿ ನಿಶ್ಚಿತವಾದ ಹುಡುಗನೊಂದಿಗೆ ವಿವಾಹವಾಗಲು ಇಷ್ಟವಿಲ್ಲದ ಕಾರಣ ಮನೆಬಿಟ್ಟು ಹೋಗುತ್ತಿರುವುದಾಗಿ ತಿಳಿಸಿದ್ದಳು.

ಈ ನಡುವೆ ಅಕ್ಕನ ಮಾತು ಕೇಳಿ ಅಘಾತಕ್ಕೊಳಗಾದ ತಂಗಿ ಸ್ಥಳದಲ್ಲಿಯೇ ಕುಸಿದು ಬಿದ್ದು, ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಗೆ ಕರೆದೊಯ್ಯುತ್ತಿರುವಾಗ ದಾರಿ ಮಧ್ಯೆ ಮೃತಪಟ್ಟಿದ್ದಳು.

Facebook Comments

comments