KARNATAKA
ಮಡಿಕೇರಿಯಲ್ಲಿ ಶಾಲಾ ವಾಹನ – ಬೈಕ್ ಅಪಘಾತ : ಬೈಕ್ ಸವಾರ ಸ್ಥಳದಲ್ಲೇ ಸಾವು
ಮಡಿಕೇರಿ, ಜುಲೈ 13 : ಬೆಳ್ಳಂಬೆಳಗ್ಗೆ ಚೆಟ್ಟಳ್ಳಿ ಸಮೀಪದ ಕತ್ತಲೆಕಾಡು ತಿರುವಿನಲ್ಲಿ ಶಾಲಾ ವಾಹನ – ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊರ್ವ ಸ್ಥಿತಿ ಗಂಭೀರವಾಗಿದೆ ಎಂಬ ಘಟನೆ ಬೆಳಕಿಗೆ ಬಂದಿದೆ.
ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೂಲಿ ಕೆಲಸಕ್ಕೆ ತೆರಳುವಾಗ ದುರಂತ ಸಂಭವಿಸಿದೆ. ಮಕ್ಕಂದೂರು ನಿವಾಸಿ ಕೂಲಿ ಕಾರ್ಮಿಕ ಲಿತೀಶ್ ಪೂಜಾರಿ (22) ಮೃತ ದುರ್ದೈವಿ, ಮೂರನೇ ಮೈಲು ನಿವಾಸಿ ಬಿ.ಎನ್.ಕೋಟಿ (60 )ಗಾಯಗೊಂಡ ಕಾರ್ಮಿಕರಾಗಿದ್ದಾರೆ.
You must be logged in to post a comment Login