Connect with us

    LATEST NEWS

    ಹಿಜಬ್ ತೀರ್ಪು – ಮಾರ್ಚ್ 15 ರಂದು ದಕ್ಷಿಣಕನ್ನಡ ಮತ್ತು ಉಡುಪಿಯಲ್ಲಿ ಶಾಲಾ ಕಾಲೇಜುಗಳಲ್ಲಿ ರಜೆ

    ಮಂಗಳೂರು ಮಾರ್ಚ್ 14: ನಾಳೆ ಮಾರ್ಚ್ 15 ರಂದು ರಾಜ್ಯ ಹೈಕೋರ್ಟ್ ಹಿಜಬ್ ವಿವಾದ ಕುರಿತಂತೆ ತೀರ್ಪು ನೀಡಲಿರುವ ಹಿನ್ನಲೆ ಮುಂಜಾಗೃತ ಕ್ರಮವಾಗಿ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ಜಿಲ್ಲಾಧಿಕಾರಿಗಳು ರಜೆ ಘೋಷಿಸಿದ್ದಾರೆ.


    ಶಾಲೆ ಮತ್ತು ಕಾಲೇಜುಗಳಲ್ಲಿ ಹಿಜಬ್ ಧರಿಸಿ ತರಗತಿಯಲ್ಲಿ ಪಾಠ ಕೇಳಲು ಅವಕಾಶ ನೀಡುವಂತೆ ವಿಧ್ಯಾರ್ಥಿನಿಯರು ಸಲ್ಲಿಸಿರುವ ರಿಟ್ ಅರ್ಜಿಗಳ ತೀರ್ಪು ಹೈಕೋರ್ಟ್ ನಾಳೆ ನೀಡಲಿದೆ. ಮಂಗಳವಾರದಂದು ಹೈಕೋರ್ಟ್ ನ ತ್ರಿಸದಸ್ಯ ಪೀಠ ತೀರ್ಪು ಪ್ರಕಟಿಸಲಿದೆ. ಈ ಹಿನ್ನೆಲೆಯಲ್ಲಿ ಭದ್ರತೆಯ ಹಾಗೂ ಸುರಕ್ಷತೆಯ ದೃಷ್ಠಿಯಿಂದ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಪ್ರಾಥಮಿಕ, ಪೂರ್ವ ಪ್ರಾಥಮಿಕ, ಪ್ರೌಢ ಶಾಲೆ, ಪಿಯು ಕಾಲೇಜು, ಪದವಿ, ಉನ್ನತ ಶಿಕ್ಷಣ ಸಂಸ್ಥೆಗಳಿಗೂ ದ.ಕ. ಜಿಲ್ಲೆಯಲ್ಲಿ ರಜೆ ನೀಡಿ ಆದೇಶ ನೀಡಲಾಗಿದೆ. ಇನ್ನು ಮಂಗಳವಾರದಂದು ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿವೆ ಎಂದು ಡಿಸಿ ಮಾಹಿತಿ ನೀಡಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *