LATEST NEWS
ಶೋಭಾ ಕರಂದ್ಲಾಜೆ ಇಂಧನ ಸಚಿವೆಯಾಗಿದ್ದಾಗ 90 ಕೋಟಿ ಅವ್ಯವಹಾರ ಆರೋಪ ಎಸಿಬಿಗೆ ದೂರು
ಶೋಭಾ ಕರಂದ್ಲಾಜೆ ಇಂಧನ ಸಚಿವೆಯಾಗಿದ್ದಾಗ 90 ಕೋಟಿ ಅವ್ಯವಹಾರ ಆರೋಪ ಎಸಿಬಿಗೆ ದೂರು
ಮಂಗಳೂರು ಡಿಸೆಂಬರ್ 28: ಮಾಜಿ ಇಂಧನ ಖಾತೆ ಸಚಿವೆ ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ದ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ಸಂಸದೆ ಶೋಭಾ ಕರಂದ್ಲಾಜೆ ಇಂಧನ ಖಾತೆ ಸಚಿವೆ ಆಗಿದ್ದ ಸಮಯದಲ್ಲಿ ವಿದ್ಯುತ್ ಇಲಾಖೆ ಖರೀದಿಸಿದ ಸಾಮಾಗ್ರಿಗಳಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂದು ನೀತಿ ತಂಡ ಎನ್ನುವ ಸಂಘಟನೆ ಆರೋಪಿಸಿದೆ. ಈ ಸಂಬಂಧ ಮಾಜಿ ಇಂಧನಖಾತೆ ಸಚಿವೆ ಶೋಭಾ ಕರಂದ್ಲಾಜೆಯವರು ಸೇರಿದಂತೆ ಹನ್ನೆರಡು ಅಧಿಕಾರಿಗಳ ವಿರುದ್ಧ ನೀತಿ ತಂಡದಿಂದ ಎಸಿಬಿಗೆ ದೂರು ನೀಡಲಾಗಿದೆ.
ಬೆಂಗಳೂರು BESCOM ಕಂಪನಿಯಲ್ಲಿ ದರ ಗುತ್ತಿಗೆ 331-332 ನ್ನು LS Cable India Pvt.Ltd. ಹರಿಯಾಣ ಕಂಪನಿಯವರು ಪಡೆದಿರುತ್ತಾರೆ. ಇವರ ಸಹಾಯ ಗುತ್ತಿಗೆದಾರರಾಗಿ Asian FabTec Ltd ಪೀಣ್ಯ ಇಂಡಸ್ಟ್ರಿಯಲ್ ಏರಿಯಾ ಬೆಂಗಳೂರು 58, ಇವರು ಕೆಲಸ ನಿರ್ವಹಿಸಿರುತ್ತಾರೆ. BESCOM ಕಂಪನಿಯ 54-55 ನೇ ಸಾಲಿನ ಮಂಡಳಿ ಸಭೆಯಲ್ಲಿ SR ದರ( ಅಂದರೆ ಸರ್ಕಾರ ನಿಗದಿಪಡಿಸಿದ ದರ) ಕ್ಕಿಂತ ಸಾವಿರಾರು ಪಟ್ಟು ಹೆಚ್ಚಾಗಿ ನಿಗದಿಪಡಿಸಲಾಗಿದೆ.
ಅದರಲ್ಲಿ ಇಂದಿನ ಮುಖ್ಯಮಂತ್ರಿಯವರ ಆಪ್ತ ಕಾರ್ಯದರ್ಶಿಯೂ, KPTCL ನ MD ಯಾಗಿರುವ ಎಸ್. ಸೆಲ್ವ ಕುಮಾರ್ ಸೇರಿದಂತೆ ಒಟ್ಟು 12 IAS ಅಧಿಕಾರಿಯವರು ಸೇರಿರುತ್ತಾರೆ ಎನ್ನುವ ಮಾಹಿತಿಯನ್ನು ದೂರಿನಲ್ಲಿ ನೀಡಲಾಗಿದೆ.
ನೀತಿ ತಂಡದ ಪ್ರಕಾರ ಬೆಂಗಳೂರು BESCOM ಕಂಪನಿಯೂ 90 ಕೋಟಿ ರೂ ಟೆಂಡರ್ ನ್ನು 2012-2013 ರಲ್ಲಿ ಕರೆದಿರುತ್ತಾರೆ. ಈ ಕಾಮಗಾರಿಯಲ್ಲಿ ಉಪಯೋಗಿಸಿರುವ ಸಾಮಾಗ್ರಿಗಳನ್ನು BESCOM ಕಂಪನಿಯ ಗುಣಮಟ್ಟ ಪರೀಕ್ಷಾ ಅಧಿಕಾರಿಯವರು ಗುಣಮಟ್ಟ ಪರೀಕ್ಷೆ ಮಾಡಿ ನೀಡಿರುವ ಲೆಕ್ಕ ಪತ್ರದಲ್ಲಿ ನೀಡಿರುವ ಸಾಮಾಗ್ರಿಗಳಿಗೆ SR ದರದಂತೆ ಹೊಂದಾಣಿಕೆ ಮಾಡಿದರೆ 26 ಕೋಟಿಯ ಸಾಮಾಗ್ರಿಗಳ ಕಾಮಗಾರಿ ನಡೆದಿರುದಾಗಿ RTI ಕಾಯ್ದೆ ಅಡಿಯಲ್ಲಿ ಪಡೆದಿರುವ ಮಾಹಿತಿಯಲ್ಲಿದೆ.
ಉದಾಹರಣೆಗೆ: Distribution box ( ಸರ್ವಿಸ್ box) ಇದಕ್ಕೆ SR ದರ 1987/00 ರೂ.
ದರ ಗುತ್ತಿಗೆ 331-332 ರಲ್ಲಿ ನೀಡಿರುವುದು 6000/00
ಒಂದು box ನಲ್ಲಿ ವ್ಯತ್ಯಾಸ 4013 /00ರೂ
ಒಟ್ಟು ಖರೀದಿ ಮಾಡಿರುವ box 18396
SR ದರ ದಂತೆ ಇದರ ಸಾಮಾಗ್ರಿಗೆ ಮತ್ತು ಲೇಬರ್ ಚಾರ್ಜ್ 4 ಕೋಟಿ 53ಲಕ್ಷ 9 ಸಾವಿರದ 48 ರೂಪಾಯಿ.
ದರ ಗುತ್ತಿಗೆ 331-332 ರ ದರ ನಿಗದಿಪಡಿಸಿದಂತೆ 15ಕೋಟಿ 63ಲಕ್ಷ 66ಸಾವಿರ.
ಇದೇ ರೀತಿಯಲ್ಲಿ ನೋಡುವುದಾದರೆ ಒಂದರಲ್ಲೇ ಹಗರಣ :11ಕೋಟಿ 10ಲಕ್ಷದ56 ಸಾವಿರ ರೂಪಾಯಿಗಳು,
ಇದೇ ಕಾಮಗಾರಿಯಲ್ಲಿ Piercing connector- 89040 ಖರೀದಿ ಮಾಡಿರುತ್ತಾರೆ.
ಇದರ SR ದರ 152 ,217,
ಲೇಬರ್ ಚಾರ್ಜ್ 48, 68,
ಇಲ್ಲಿ 2 ಕೋಟಿ 20ಲಕ್ಷಗಳು.
331-332 ದರ ಗುತ್ತಿಗೆ ಯಲ್ಲಿ 855/00 ರೂ
ಲೇಬರ್ ಚಾರ್ಜ್ 650/00ರೂ
ಇದರೊಂದಿಗೆ ಹೊಂದಾಣಿಕೆ ಮಾಡಿದರೆ
13ಕೋಟಿ 40ಲಕ್ಷಗಳು.
ಇಲ್ಲಿ ಇದರಲ್ಲಿ 11ಕೋಟಿ 20ಲಕ್ಷ ಗಳಷ್ಟು ಹಗರಣ.
ಇದೇ ರೀತಿಯಲ್ಲಿ ಬಂಚ್ ಕೇಬಲ್ ಕಾಮಗಾರಿಗೆಗೆ ಉಪಯೋಗಿಸಿರುವ 28 ತರದ ಸಾಮಾಗ್ರಿಗಳಿಗೆ SR ದರಕ್ಕಿಂತ ಸಾವಿರಾರು ಪಟ್ಟು ಹೆಚ್ಚುವರಿ ದರ ನಿಗದಿಪಡಿಸಿ 90ಕೋಟಿ ಕಾಮಗಾರಿಯಲ್ಲಿ 26 ಕೋಟಿ ಖರ್ಚು ಮಾಡಿ 64 ಕೋಟಿ ಹಗರಣ. ಈ ವಿಚಾರಕ್ಕೆ ಸಂಬಂಧಿಸಿದಂತೆ ನೀತಿ ತಂಡ ಲೋಕಾಯುಕ್ತರಿಗೆ ದೂರು ನೀಡಿದ್ದಾರೆ. ಇದರ ವಿರುದ್ಧ FIR ಮಾಡದಿದ್ದರೆ ಶೀಘ್ರದಲ್ಲೇ ಕೋರ್ಟ್ ಮೆಟ್ಟಿಲು ಹತ್ತಲು ನೀತಿ ತಂಡ ಚಿಂತನೆ ನಡೆಸಿದೆ.