Connect with us

UDUPI

ಬೋನಿಗೆ ಬಿದ್ದ ಗುಂಪಾಗಿ ದಾಳಿ ಮಾಡುತ್ತಿರುವ ಚಿರತೆಗಳು

ಬೋನಿಗೆ ಬಿದ್ದ ಗುಂಪಾಗಿ ದಾಳಿ ಮಾಡುತ್ತಿರುವ ಚಿರತೆಗಳು

ಉಡುಪಿ ಡಿಸೆಂಬರ್ 28: ಹಗಲು ಹೊತ್ತಿನಲ್ಲಿ ಗುಂಪಾಗಿ ಬಂದು ದಾಳಿ ಮಾಡುತ್ತಿದ್ದ 3 ಚಿರತೆಗಳಲ್ಲಿ 2 ಚಿರತೆಗಳನ್ನು ಬೋನಿಗೆ ಬೀಳಿಸುವಲ್ಲಿ ಅರಣ್ಯ ಇಲಾಖೆ ಸಫಲವಾಗಿದೆ.

ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾಮದ ಇರ್ಜಿಕೊಡ್ಲು ಎಂಬಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಎರಡು ಚಿರತೆಗಳು ಬಿದ್ದಿವೆ.
ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾಮದ ಪರಿಸರದಲ್ಲಿ ಇತ್ತೀಚೆಗೆ 3 ಚಿರತೆಗಳು ಗುಂಪಾಗಿ ದಾಳಿ ನಡೆಸಿದ್ದವು, ಇಲ್ಲಿಯವರೆಗೆ ಗ್ರಾಮದ ಪರಿಸರದಲ್ಲಿ ಸುಮಾರು 20 ಹಸು 15 ಸಾಕು ನಾಯಿ ಸೇರಿದಂತೆ ಬೆಕ್ಕುಗಳನ್ನು ಚಿರತೆಗಳು ಬೇಟೆಯಾಡಿದ್ದವು.

ಇತ್ತೀಚೆಗೆ ಮೊಳಹಳ್ಳಿ ಗ್ರಾಮದ ಗುಲಾಬಿ ಕುಲಾಲ್ತಿ ಮನೆಯ ಹಟ್ಟಿಯಲ್ಲಿದ್ದ ದನಕರುಗಳ ಮೇಲೆ 3 ಚಿರತೆ ಗುಂಪಾಗಿ ದಾಳಿ ಮಾಡಿದ್ದವು. ಚಿರತೆಗಳು ಗುಂಪಾಗಿ ಬಂದು ದಾಳಿ ಮಾಡುತ್ತಿರುವುದರಿಂದ ಕಂಗೆಟ್ಟ ಸ್ಥಳೀಯರು ಭಯಭೀತರಾಗಿದ್ದು, ಒಂಟಿಯಾಗಿ ತಿರುಗಾಡುವುದು ಮತ್ತು ರಾತ್ರಿ ಸಂಚಾರ ಮಾಡುವುದನ್ನೆ ನಿಲ್ಲಿಸಿದ್ದರು.

ಚಿರತೆಗಳು ಗುಂಪಾಗಿ ದಾಳಿ ನಡೆಸುತ್ತಿರುವ ಬಗ್ಗೆ ಸ್ಥಳೀಯರು ಶಂಕರನಾರಾಯಣ ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಕ್ಷೀಪ್ರ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಗುಲಾಬಿ ಕುಲಾಲ್ತಿ ಮನೆಯ ಬಳಿ ಬೋನು ಇರಿಸಿತ್ತು. ಒಂದು ದಿನದಲ್ಲಿ ಎರಡು ಚಿರತೆಗಳು ಸೆರೆಯಾಗಿದ್ದು, ಮೂರನೆ ಚಿರತೆಗಾಗಿ ಬೋನಿರಿಸಲಾಗಿದೆ.

ಈ ಭಾಗದಲ್ಲಿ ನಿರಂತರವಾಗಿ ಚಿರತೆಗೆ ಹಾವಳಿಗೆ ಒಳಗಾಗುತ್ತಿರುವ ಹೈನುಗಾರ ಕೃಷಿಕರು, ಕಾಡು ಪ್ರಾಣಿಗಳು ನಾಡಿಗೆ ಬರದಂತೆ ಕ್ರಮಕ್ಕಾಗಿ ಸರಕಾರವನ್ನು ಆಗ್ರಹಿಸಿದ್ದಾರೆ.

Facebook Comments

comments