Connect with us

LATEST NEWS

ನದಿ ರಕ್ಷಣೆಯ ಜಾಗೃತಿ ಅಭಿಯಾನಕ್ಕೆ ಪೇಜಾವರ ಶ್ರೀ ಸಾರಥ್ಯ – ಉಡುಪಿಯಲ್ಲಿ ಸ್ವರ್ಣಾರತಿ ಅಪೂರ್ವ ಕಾರ್ಯಕ್ರಮ

ಉಡುಪಿ ಜನವರಿ 13: ಮಂಗಳವಾರ ಉಡುಪಿಯ ಪೆರಂಪಳ್ಳಿ ಸಮೀಪ ಶೀಂಬ್ರ ಕೃಷ್ಣಾಂಗಾರಕ ಸ್ನಾನಘಟ್ಟದ ಜೀವನದಿ ಸುವರ್ಣೆಯ ತೀರದಲ್ಲಿ ಅಪೂರ್ವ ಕಾರ್ಯಕ್ರಮ ನಡೆಯಿತು .‌

ಸ್ವರ್ಣೆಯ ರಕ್ಷಣೆಯ ಬಗ್ಗೆ ಜನಜಾಗೃತಿ ಮೂಡಿಸುವ ಸಲುವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಘಟಕದ ಚಿಂತನೆಯೊಂದಿಗೆ ನಡೆದ ಸ್ವರ್ಣಾರತಿ ಕಾರ್ಯಕ್ರಮದಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ವಿಶೇಷ ಆರತಿಗಳನ್ನು ಬೆಳಗಿ ಸ್ವರ್ಣೆಯ ರಕ್ಷಣೆಗೆ ಕಂಕಣಬದ್ಧರಾಗುವಂತೆ ಉಡುಪಿಯ ಸಮಸ್ತ ಜನತೆಗೆ ಕರೆ ನೀಡಿದರು .‌


ಸ್ಥಳೀಯ ಭಜನಾಮಂಡಳಿಯ ಸದಸ್ಯರ ಭಜನೆ ,ಯುವಕರ ಚಂಡೆವಾದನ , ತೇಲುವ ತೆಪ್ಪದಲ್ಲಿ ವಿದುಷಿ ಪವನಾ ಬಿ ಆಚಾರ್ಯರ ವೀಣಾವಾದನ , ನೂರಾರು ಸಾಲು ದೀಪಗಳು ಕಾರ್ಯಕ್ರಮದ ಆಕರ್ಷಣೆಗಳಾಗಿತ್ತು . ತಾಯಿ ಭಾರತಿಯ ಭಾವಚಿತ್ರಕ್ಕೆ ಎಲ್ಲರೂ ಪುಷ್ಪಾರ್ಚನೆಗೈದರು .

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *