LATEST NEWS
ಸಮುದ್ರ ಪಾಲಾಗುತ್ತಿದ್ದ ಯುವತಿ ರಕ್ಷಣೆ…!!
ಮಂಗಳೂರು: ಮಂಗಳೂರಿನ ಸೋಮೇಶ್ವರ ಬೀಚ್ ನಲ್ಲಿ ಸಮುದ್ರದ ಅಲೆಗೆ ಕೊಚ್ಚಿ ಹೋಗಲಿದ್ದ ಯುವತಿಯನ್ನು ಕರಾವಳಿ ಕಾವಲು ಪಡೆಯ ಜೀವರಕ್ಷಕ ಅಶೋಕ್ ಕುಮಾರ್ ಸೋಮೇಶ್ವರ್ ಮತ್ತು ಸಿಬ್ಬಂದಿ ರಕ್ಷಿಸಿದ್ದಾರೆ. ಬೆಂಗಳೂರಿನಿಂದ ವಿಹಾರಕ್ಕೆಂದು ಸೋಮೇಶ್ವರಕ್ಕೆ ಬಂದಿದ್ದ ಮೂರು ಮಂದಿ ಯುವತಿಯರು ಸಮುದ್ರದಲ್ಲಿ ಅಲೆಗಳೊಂದಿಗೆ ಆಟವಾಡುತ್ತಿದ್ದಾಗ, ಒಬ್ಬಾಕೆ ದೊಡ್ಡ ಅಲೆಗಳ ಹೊಡೆತಕ್ಕೆ ಸಿಲುಕಿ ಸಮುದ್ರ ಪಾಲಾಗುತ್ತಿದ್ದಾಗ ರಕ್ಷಣೆ ಮಾಡಲಾಗಿದೆ.
ಬೆಂಗಳೂರಿನ ಬೊಮ್ಮಸಂದ್ರದ ನಿವಾಸಿ ಕೀರ್ತಿ ಸಮುದ್ರ ಪಾಲಾಗುತ್ತಿದ್ದಾಗ ರಕ್ಷಿಸಲ್ಪಟ್ಟವಳು. ಕೀರ್ತಿ ತನ್ನ ಸ್ನೇಹಿತೆಯರೊಂದಿಗೆ ಸೋಮೇಶ್ವರ ಕಡಲ ತೀರಕ್ಕೆ ಬಂದಿದ್ದರು. ಎಲ್ಲರು ಸಮುದ್ರದ ದಡದಲ್ಲಿ ಆಟವಾಡುತ್ತಿದ್ದಾಗ ಕೀರ್ತಿ ಬೃಹತ್ ಅಲೆಯ ಹೊಡೆತಕ್ಕೆ ಸಿಲುಕಿ ಸಮುದ್ರ ಪಾಲಾಗುತ್ತಿದ್ದುದನ್ನು ಗಮನಿಸಿದ ಕರಾವಳಿ ಕಾವಲು ಪಡೆಯ ಸಿಬ್ಬಂದಿ ಜೀವರಕ್ಷಕ ಅಶೋಕ್ ಸೋಮೇಶ್ವರ ,ಕಿರಣ್ ಆಂಟನಿ ಮತ್ತು ಶಿವಪ್ರಸಾದ್ ತಕ್ಷಣ ನೀರಿಗೆ ಧುಮುಕಿ ಕೀರ್ತಿಯನ್ನು ರಕ್ಷಿಸಿದ್ದಾರೆ. ತೀವ್ರ ಅಸ್ವಸ್ಥಗೊಂಡಿದ್ದ ಕೀರ್ತಿಗೆ ಜೀವರಕ್ಷಕರು ಪ್ರಥಮ ಚಿಕಿತ್ಸೆ ನೀಡಿದ ಕಾರಣ ಕೀರ್ತಿ ಚೇತರಿಸಿಕೊಂಡಿದ್ದು, ತಾವು ಉಳಿದು ಕೊಂಡಿದ್ದ ಸುರತ್ಕಲ್ ನ ಲಾಡ್ಜ್ ಗೆ ಕ್ಯಾಬ್ನಲ್ಲಿ ಮರಳಿದ್ದಾರೆ.
Facebook Comments
You may like
-
ಜೆರಾಕ್ಸ್ ಡಿಎಲ್ ನೀಡಿದ್ದಕ್ಕೆ ಯುವಕನ ಮೇಲೆ ಕೋಟ ಪೊಲೀಸರ ದರ್ಪ..ಯುವಕನ ತಾಯಿಯ ಮೇಲೂ ಕೈ ಮಾಡಿದ ಆರೋಪ….!!
-
ಕಾಟಿಪಳ್ಳ – ಬೈಕ್ ನಲ್ಲಿ ಬಂದು ಯುವಕನಿಗೆ ಚೂರಿ ಇರಿತ
-
35 ಲಕ್ಷದ ಚಿನ್ನಾಭರಣ ಗಿಫ್ಟ್ ಆಸೆಗೆ 1.35 ಲಕ್ಷ ಕಳೆದುಕೊಂಡ ಮಂಗಳೂರು ವ್ಯಕ್ತಿ..!
-
ಸಂದರ್ಶನದಲ್ಲಿ ಮಹಿಳಾ ಅಧಿಕಾರಿಗೆ ಖಾಸಗಿ ಅಂಗ ಪ್ರದರ್ಶಿಸಿದ ಐಟಿ ಉದ್ಯೋಗಾಕಾಂಕ್ಷಿ..!
-
ಕುಂದಾಪುರದಲ್ಲಿ ಬೈಕ್ ಕಳ್ಳರಿಗೆ ಸಾರ್ವಜನಿಕರಿಂದ ಬಿತ್ತು ಗೂಸಾ…!
-
ಬಂಗಾರ್ ಪಲ್ಕೆಯ ಜಲಪಾತದ ಗುಡ್ಡ ಕುಸಿದು ಓರ್ವ ಮೃತ್ಯು
You must be logged in to post a comment Login