Gulf News
ವಿಶ್ವದ ಅತೀ ಉದ್ದ ಮತ್ತು ವೇಗದ ‘ರಿಯಾದ್ ಮೆಟ್ರೋ’ ಲೋಕಾರ್ಪಣೆಗೊಳಿಸಿದ ಸೌದಿ ದೊರೆ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್…!
ವಿಶ್ವದ ಅತಿ ಉದ್ದ ಮತ್ತು ವೇಗದ ರಿಯಾದ್ ಮೆಟ್ರೋ ವನ್ನು ಸೌದಿ ಅರೇಬಿಯಾ ದ ದೊರೆ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅವರು ಲೋಕಾರ್ಪಣೆಗೊಳಿಸಿದ್ದಾರೆ.
ರಿಯಾದ್ : ವಿಶ್ವದ ಅತಿ ಉದ್ದ ಮತ್ತು ವೇಗದ ರಿಯಾದ್ ಮೆಟ್ರೋ ವನ್ನು ಸೌದಿ ಅರೇಬಿಯಾ ದ ದೊರೆ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅವರು ಲೋಕಾರ್ಪಣೆಗೊಳಿಸಿದ್ದಾರೆ.
ಸೌದಿ ಅರೇಬಿಯಾದ ರಾಜಧಾನಿ ರಿಯಾದ್ ನಲ್ಲಿ ಈ ಮೆಟ್ರೋ “ಸಾರ್ವಜನಿಕ ಸಾರಿಗೆ ಜಾಲದ” ಬೆನ್ನೆಲುಬಾಗಿದೆ. ಬಹು ನಿರೀಕ್ಷಿತ ಈ ರಿಯಾದ್ ಮೆಟ್ರೋ ಡಿಸೆಂಬರ್ 1, 2024 ರಿಂದ ಅಧಿಕೃತವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಲಿದೆ.
ರಿಯಾದ್ ನಗರದ ರಾಯಲ್ ಕಮಿಷನ್ ತನ್ನ ಬಳಕೆದಾರರಿಗೆ ತಡೆರಹಿತ ಮತ್ತು ಪರಿಣಾಮಕಾರಿ ಪ್ರಯಾಣದ ಅನುಭವವನ್ನು ಖಚಿತಪಡಿಸಿಕೊಳ್ಳಲು ರಿಯಾದ್ ಮೆಟ್ರೋವನ್ನು ಹಂತ ಹಂತವಾಗಿ ಪ್ರಾರಂಭಿಸುವುದಾಗಿ ಘೋಷಿಸಿದೆ.
84 ಸ್ಟೇಷನ್ಸ್ , 6 ರೈಲು ಮಾರ್ಗಳನ್ನು ಹೊಂದಿರುವ ಈ ಮೆಟ್ರೋ 176 ಕಿಮೀ ಉದ್ದವಿದೆ. ಈ ರಿಯಾದ್ ಮೆಟ್ರೋ ಅಂತ್ಯಮತ ವೇಗ ಮತ್ತು ಸಂಪೂರ್ಣ ಚಾಲಕ ರಹಿತವಾಗಿದೆ.
ಮೊಬೈಲ್ ಅಪ್ಲಿಕೇಶನ್ ಸ್ಟೋರ್ಗಳಲ್ಲಿ ಲಭ್ಯವಿರುವ “ದರ್ಬ್” ಅಪ್ಲಿಕೇಶನ್ ಮೂಲಕ ಪ್ರಯಾಣಿಕರು ತಮ್ಮ ಪ್ರವಾಸಗಳನ್ನು ಯೋಜಿಸಲು ಮತ್ತು ಟಿಕೆಟ್ಗಳನ್ನು ಖರೀದಿಸಲು ಸಾಧ್ಯವಾಗುತ್ತದೆ.