LATEST NEWS
ಉಡುಪಿ – ಮಗಳು ಆರಾಧನಾ ಜೊತೆ ಕೃಷ್ಣಮಠಕ್ಕೆ ಭೇಟಿ ನೀಡಿದ ನಟಿ ಮಾಲಾಶ್ರೀ
ಉಡುಪಿ ನವೆಂಬರ್ 29: ಕನ್ನಡದ ಹಿರಿಯ ನಟಿ ಮಾಲಾಶ್ರೀ ತಮ್ಮ ಮಗಳು ನಟಿ ಆರಾಧನಾ ಜೊತೆ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ತಮ್ಮ ಪುತ್ರಿಯೊಂದಿಗೆ ಆಗಮಿಸಿದ ಮಾಲಾಶ್ರೀ ಶ್ರೀಕೃಷ್ಣ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಬಳಿಕ ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರನ್ನು ಭೇಟಿಯಾದರು.
ಮಾಲಾಶ್ರೀ ಜೊತೆ ಪುತ್ರಿ ಆರಾಧನಾ ಕೂಡ ಮಠಕ್ಕೆ ಬಂದಿದ್ದರು. ಈ ಪರ್ಯಾಯದಲ್ಲಿ ಕೋಟಿಬಾರಿ ಭಗವದ್ಗೀತೆಯನ್ನು ಬರೆಯುವ ಕೋಟಿಗೀತಾ ಲೇಖನ ಯಜ್ಞದೀಕ್ಷೆಯನ್ನು ಇಬ್ಬರೂ ಸ್ವೀಕರಿಸಿದರು.
Continue Reading
1 Comment