LATEST NEWS
ಅಗಸ್ಟ್ 12 ರಂದು ಮಂಗಳೂರಿನಲ್ಲಿ ಸೀರೆಯುಟ್ಟ ನಾರಿಯರು ಓಟ – ನಡಿಗೆ ಕೈಗೊಳ್ಳಲಿದ್ದಾರೆ.
ಅಗಸ್ಟ್ 12 ರಂದು ಮಂಗಳೂರಿನಲ್ಲಿ ಸೀರೆಯುಟ್ಟ ನಾರಿಯರು ಓಟ – ನಡಿಗೆ ಕೈಗೊಳ್ಳಲಿದ್ದಾರೆ.
ಮಂಗಳೂರು ಜುಲೈ 11: ಮಂಗಳೂರು ಮಹಿಳಾ ರನ್ ತಂಡ ಮಂಗಳೂರು ನಗರದಲ್ಲಿ ಮೊದಲ ಬಾರಿಗೆ ಒಂದು ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದೆ. ಸೀರೆಯ ನಾರಿಯರಿಗೆ ಜಾಗಿಂಗ್ , ವಾಕಿಂಗ್ ಸ್ಥೈರ್ಯ ತುಂಬಲು ಓಟ ಹಮ್ಮಿಕೊಳ್ಳಲಾಗಿದೆ.
ಈಗ ಮಹಿಳೆಯರು ಕೂಡ ಪುರುಷರ ರೀತಿ ದೈಹಿಕ ಫಿಟ್ನೆಸ್ ಕಾಪಾಡಿಕೊಳ್ಳಲು ಜಾಂಗಿಂಗ್, ವಾಕಿಂಗ್ ಮಾಡುತ್ತಿದ್ದಾರೆ. ಆದರೆ ಜಾಂಗಿಂಗ್ ಮತ್ತು ವಾಂಕಿಂಗ್ ತೆರಳುವ ಮಹಿಳೆಯರು ಆಧುನಿಕ ಟ್ರ್ಯಾಕ್ ಸೂಟ್, ಟಿ ಶರ್ಟ್ ಧರಿಸಿ ತೆರಳುತ್ತಾರೆ.
ಆದರೆ ಸೀರೆಯನ್ನು ಧರಿಸುವ ಮಹಿಳೆಯರು ಮಾತ್ರ ಇದೆಲ್ಲದರಿಂದ ವಿಮಖರಾಗಿದ್ದು, ಆಧುನಿಕ ದಿರಿಸು ಇಲ್ಲದಿದ್ದರೆ ಜಾಗಿಂಗ್ ತೆರಳಿದರೆ ಯಾರಾದರೂ ಕೀಳಾಗಿ ಭಾವಿಸಬಹುದು ಎನ್ನುವು ಮುಜುಗರವೂ ಮಹಿಳೆಯರಲ್ಲಿ ಇರುತ್ತದೆ.
ಹೀಗಾಗಿ ಆನೇಕ ಮಹಿಳೆಯರು ಇಂತಹ ಓಟ ಅಥವಾ ನಡಿಗೆಯತ್ತ ಆಸಕ್ತಿ ಇದ್ದರೂ ಭಾಗವಹಿಸಲು ಮುಂದೆ ಬರುತ್ತಿಲ್ಲ. ಇಂತಹವರಿಗಾಗಿಯೇ ಮಂಗಳೂರು ಮಹಿಳಾ ರನ್ ತಂಡ ಒಂದು ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ್ದು ಮಂಗಳೂರಿನಲ್ಲಿ ಅಗಸ್ಟ್ 12 ರಂದು ಸೀರೆ ತೊಟ್ಟ ಮಹಿಳೆಯರ ಓಟ ಅಥವಾ ನಡಿಗೆ ಆಯೋಜಿಸಲಾಗಿದೆ.
ನಮ್ಮ ಮಂಗಳೂರು ಮಹಿಳಾ ರನ್ ತಂಡ ಕಳೆದ ವರ್ಷ ಮಹಿಳೆಯರಿಗಾಗಿ ಓಟವನ್ನು ಕದ್ರಿಯಲ್ಲಿ ಆಯೋಜಿಸಿತ್ತು. ಈ ಬಾರಿ ಮಹತ್ಮಾಗಾಂಧಿ ಉದ್ಯಾನವನದ ಸಮೀಪದ ಮಣ್ಣಗುಡ್ಡೆ ರಸ್ತೆಯಲ್ಲಿ ನಡೆಯಲಿದೆ. ಮಂಗಳೂರು ಮಹಿಳೆಯರ ಸೀರೆ ನಡೆ ಮತ್ತು ಸೀರೆ ಓಟಗಳಿಗೆ 2 ಕಿಲೋ ಮೀಟರ್ ದೂರ ನಿಗದಿ ಮಾಡಲಾಗಿದೆ. ಎಲ್ಲರೂ ಇದನ್ನು ತಲುಪಬೇಕು ಎಂಬ ಉದ್ದೇಶದಿಂದ ಈ ಗುರಿ ಇರಿಸಲಾಗಿದೆ.
ಎರಡು ವಿಭಾಗದಲ್ಲಿ ಸ್ಪರ್ಧೆ
ಓಟ ನಡಿಗೆಯನ್ನು ಎರಡು ವಿಭಾಗದಲ್ಲಿ ವಿಂಗಡಿಸಲಾಗಿದೆ. 18 ರಿಂದ 80 ವರ್ಷದೊಳಗಿನ ಎಲ್ಲರೂ ಇದರಲ್ಲಿ ಪಾಲ್ಗೊಳ್ಳಬಹುದು, ಪಾಲ್ಗೊಂಡ ಎಲ್ಲರಿಗೂ ಪದಕ ಮತ್ತು ಪ್ರಮಾಣಪತ್ರ ಮತ್ತು ಲಘು ಉಪಹಾರ ವಿತರಿಸಲಾಗುವುದು. ದಾರಿಯುದ್ದಕ್ಕೂ ನೀರು ಮತ್ತು ವೈದ್ಯಕೀಯ ಸೌಲಭ್ಯ ಕೂಡ ಇದ್ದು ಪಾಲ್ಗೊಂಡವರ ಸುರಕ್ಷತೆಗೆ ಒತ್ತು ನೀಡಲಾಗುತ್ತದೆ.
ಮಹಿಳೆಯರಿಗೆ ದೈಹಿಕ ಚಟುವಟಿಕೆಗಳಾದ ವ್ಯಾಯಾಮ ,ಜಾಂಗಿಂಗ್, ಓಟ ಗಳಿಗೆ ಪ್ರೇರೇಪಿಸಲು ಈ ಸೀರೆ ಓಟ ಕೈಗೊಳ್ಳಲಾಗಿದ್ದು, ಇದರಿಂದಾಗಿ ಮಹಿಳೆಯರಲ್ಲಿ ದೈಹಿಕ ಚಟುವಟಿಕೆಗಳಿಗೆ ನಾವು ತೊಡುವ ಉಡುಪು ಅಡ್ಡವಾಗಲಾರದು ಎಂಬ ಭಾವನೆ ಅವರ ಮನಸ್ಸಿನಲ್ಲಿ ಬರಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎನ್ನುತ್ತಾರೆ ಸಂಯೋಜಕರು.