Connect with us

    KARNATAKA

    ಸೀರೆ ಸೆರಗಿನಿಂದ ಅವಾಂತರಕ್ಕೆ ಬೈಕ್ ಚಕ್ರದೊಳಗೆ ಸಿಲುಕಿದ ಮಹಿಳೆ ಕಾಲು

    ಚಿಕ್ಕಮಗಳೂರು ಫೆಬ್ರವರಿ 8: ಬೈಕ್ ನಲ್ಲಿ ಸಂಚರಿಸುತ್ತಿದ್ದ ವೇಳೆ ಮಹಿಳೆಯೊಬ್ಬರ ಸೀರೆಯ ಸೆರಗು ಬೈಕ್ ಚಕ್ರಕ್ಕೆ ಸಿಲುಕಿ ಉಂಟಾದ ಅಪಘಾತದಲ್ಲಿ ಮಹಿಳೆಯ ಕಾಲು ಚಕ್ರದೊಳಗೆ ಸಿಲುಕಿದ ಘಟನೆ ತರೀಕೆರೆ ಪಟ್ಟಣದಲ್ಲಿ ನಡೆದಿದೆ. ಬೈಕ್ ನ ಚಕ್ರದೆಡೆಯಿಂದ ಮಹಿಳೆ ಕಾಲನ್ನು ಬಿಡಿಸಲಾಗದೆ ಗಂಟೆಗಳ ಕಾಲ ನೋವಿನಿಂದ ನರಳಾಡಿದರು.


    ಇಟ್ಟಿಗೆ ಗ್ರಾಮದ ಯಶೋದಾ ಬಾಯಿ ಈ ರೀತಿ ಸಂಕಷ್ಟಕ್ಕೊಳಗಾದ ಮಹಿಳೆ. ಇವರು ಬೈಕಿನಲ್ಲಿ ಸಹ ಸವಾರೆಯಾಗಿ ಸಂಚರಿಸುತ್ತಿದ್ದ ವೇಳೆ ಉಟ್ಟಿದ್ದ ಸೀರೆ ಅವರಿಗೆ ಅರಿವಿಲ್ಲದೆಯೇ ಬೈಕ್ ಚಕ್ರಕ್ಕೆ ಸಿಲುಕಿದೆ. ಸೀರೆಯನ್ನು ಬೈಕ್ ಸೆಳೆದ ರಭಸಕ್ಕೆ ಯಶೋದಾ ಅವರ ಕಾಲು ಕೂಡಾ ಚಕ್ರದೆಡೆಗೆ ಸಿಲುಕಿಕೊಂಡಿತ್ತು. ಈ ವೇಳೆ ಬೈಕ್ ರಸ್ತೆಯಲ್ಲೇ ಉರುಳಿಬಿದ್ದಿದೆ.

    ಆದರೆ ಮಹಿಳೆಯ ಕಾಲನ್ನು ಸುಲಭದಲ್ಲಿ ಚಕ್ರದೆಡೆಯಿಂದ ಹೊರ ತೆಗೆಯಲು ಆಗಿಲಿಲ್ಲ. ಇದರಿಂದ ಕೆಲ ತಾಸು ಮಹಿಳೆ ನೋವಿನಿಂದ ನರಳಾಡುವಂತಾಗಿತ್ತು. ಬಳಿಕ ಮ್ಯಕಾನಿಕ್ ಅನ್ನು ಕರೆಸಿ ಬೈಕಿನ ಚೈನ್ ಅನ್ನು ತುಂಡರಿಸಿ ಮಹಿಳೆಯನ್ನು ರಕ್ಷಿಸಲಾಯಿತು. ಕಾಲಿಗೆ ತೀವ್ರ ತರಹದ ಗಾಯಗಳಾಗಿವೆ.

     

    Share Information
    Advertisement
    Click to comment

    You must be logged in to post a comment Login

    Leave a Reply