FILM
ತನ್ನ ಹೆಸರಿನ ನಕಲಿ ಖಾತೆಗಳ ವಿರುದ್ದ ಸಚಿನ್ ತೆಂಡೂಲ್ಕರ್ ಪುತ್ರಿಯ ಆಕ್ರೋಶ
ಮುಂಬೈ ನವೆಂಬರ್ 23: ಡೀಫ್ ಪೇಕ್ ವಿಡಿಯೋ ಪೋಟೋಗಳ ನಡುವೆ ಇದೀಗ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ತನ್ನ ಹೆಸರಿನಲ್ಲಿರುವ ನಕಲಿ ಸಾಮಾಜಿಕ ಜಾಲತಾಣಗಳ ಖಾತೆಗಳ ವಿರುದ್ದ ಗರಂ ಆಗಿದ್ದು, ನಕಲಿ ಪರೋಡಿ ಖಾತೆಗಳನ್ನು ಕೂಡಲೇ ರದ್ದು ಮಾಡುವಂತೆ ಟ್ವಿಟರ್ ಮತ್ತು ಇತರೆ ಸಾಮಾಜಿಕ ಜಾಲತಾಣ ಪ್ಲಾಟ್ ಫಾರ್ಮ್ ಗಳಿಗೆ ಮನವಿ ಮಾಡಿದ್ದಾರೆ.
ತಮ್ಮ ಹೆಸರಿನಲ್ಲಿ ಕಾರ್ಯಾಚರಿಸುತ್ತಿರುವ ನಕಲಿ ಖಾತೆಗಳನ್ನು ಕ್ಲೋಸ್ ಮಾಡುವಂತೆ ಸೋಶಿಯಲ್ ಮೀಡಿಯಾ ಎಕ್ಸ್ (ಟ್ವಿಟರ್)ಗೆ ಸಾರಾ ತೆಂಡೂಲ್ಕರ್ ಮನವಿ ಮಾಡಿದ್ದು, ಹಾಗೇ ಡೀಪ್‌ಫೇಕ್ ಫೋಟೋಗಳ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದಾರೆ.
ಸೋಶಿಯಲ್ ಮೀಡಿಯಾ ನಮಗೆಲ್ಲರಿಗೂ ನಮ್ಮ ಸಂತಸ, ದುಃಖ ಹಾಗೂ ದಿನಚರಿಯನ್ನು ಹಂಚಿಕೊಳ್ಳಲು ಅದ್ಭುತ ಜಾಗ ಎಂಬುದರಲ್ಲಿ ಎರಡು ಮಾತಿಲ್ಲ. ಆದರೂ, ತಂತ್ರಜ್ಞಾನದ ದುರ್ಬಳಕೆಯು ವಿಷಾದಗೊಳಿಸುವಂಥದು. ಯಾಕೆಂದರೆ ಇದು ಇಂಟರ್‌ನೆಟ್‌ನ ವಿಶ್ವಾಸಾರ್ಹತೆ ಹಾಗು ಅಧಿಕೃತತೆಯನ್ನು ಕಿತ್ತುಕೊಳ್ಳುತ್ತದೆ. ನನ್ನ ಕೆಲವು ಡೀಪ್‌ಫೇಕ್ ಫೋಟೋಗಳು ಕಂಡುಬಂದಿವೆ. ಅವೆಲ್ಲವೂ ಸತ್ಯಕ್ಕೆ ದೂರವಾದುದು. @SaraTendulkar_ ಎಂಬ Xನ (ಮೊದಲಿನ ಟ್ವಿಟರ್) ಖಾತೆಯು ಪರೋಡಿ ಖಾತೆ, ಹಾಗೆಂದು ಅದು ಹೇಳಿಕೊಂಡಿದ್ದರೂ ನನ್ನ ಸೋಗಿನಲ್ಲಿ ಜನತೆಯನ್ನು ದಾರಿ ತಪ್ಪಿಸುವ ಉದ್ದೇಶವನ್ನು ಹೊಂದಿದೆ. ಟ್ವಿಟರ್ ನಲ್ಲಿ ನನ್ನ ಖಾತೆಯಿಲ್ಲ. ಟ್ವಿಟರ್ ಕೂಡ ಇಂಥ ಅಕೌಂಟ್‌ಗಳ ಬಗ್ಗೆ ಗಮನ ಹರಿಸಿ ಅವುಗಳನ್ನು ವಜಾ ಮಾಡಬೇಕು. ಮನರಂಜನೆ ಎಂಬುದು ಸತ್ಯವನ್ನು ಬಲಿಗೊಟ್ಟು ಬರಬಾರದು. ಸತ್ಯ ಮತ್ತು ವಾಸ್ತವದ ನೆಲೆಯಲ್ಲಿ ನಿಂತಿರುವ ಸಂವಹನವನ್ನು ಬೆಳೆಸೋಣ ಎಂದು ಬರೆದುಕೊಂಡಿದ್ದಾರೆ.