KARNATAKA
ಸಪ್ತಪದಿ ಯೋಜನೆ: ನವ ದಂಪತಿ ಖಾತೆಗೆ 55 ಸಾವಿರ ರೂ.
ಬೆಂಗಳೂರು, ಫೆಬ್ರವರಿ 01: ರಾಜ್ಯ ಸರ್ಕಾರ ಮುಜರಾಯಿ ಇಲಾಖೆಯಿಂದ ಸಪ್ತಪದಿ ಯೋಜನೆ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಜನರಿಗೆ ಅನುಕೂಲವಾಗುವಂತೆ ಬದಲಾವಣೆ ಮಾಡಲಾಗಿದ್ದು, ಪ್ರತಿ ತಿಂಗಳು ವಿವಾಹ ನಡೆಯಲಿದೆ.
ಫೆಬ್ರವರಿಯಲ್ಲಿ 17 ಮತ್ತು 25 ರಂದು ಸಾಮೂಹಿಕ ವಿವಾಹ ನಡೆಯಲಿದೆ. ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮದುವೆಯಾಗಲು ನೋಂದಣಿ ಮಾಡಿಸಿಕೊಂಡ ವರನಿಗೆ ಪಂಚೆ-ಶಲ್ಯ ಖರೀದಿಗೆ 5000 ರೂ. ನೀಡಲಾಗುವುದು. ಧಾರೆ ಸೀರೆ ಖರೀದಿ, ಇತರೆ ಖರ್ಚಿಗೆ ವಧುವಿಗೆ 10,000 ರೂಪಾಯಿ ಹಾಗೂ ಚಿನ್ನದ ತಾಳಿ ಖರೀದಿಗೆ 40,000 ನೀಡಲಾಗುವುದು. ಮದುವೆಯ ದಿನದಂದು ವಧು -ವರರ ಖಾತೆಗೆ ಹಣ ಜಮಾ ಮಾಡಲಾಗುವುದು.
ಆಗಮಶಾಸ್ತ್ರದ ಪ್ರಕಾರ ಪ್ರತಿ ತಿಂಗಳು ಎರಡು ದಿನದಂದು ಮದುವೆ ನಿಗದಿಪಡಿಸಲಾಗುತ್ತದೆ. ದೇವಾಲಯಗಳ ಆಡಳಿತ ಮಂಡಳಿ ಮತ್ತು ಜನರಿಗೆ ಒಪ್ಪಿಗೆಯಾಗದಿದ್ದರೆ ಬೇರೆ ಅನುಕೂಲವಾದ ದಿನಾಂಕವನ್ನು ಗೊತ್ತುಪಡಿಸಿ ಮದುವೆ ಮಾಡಬಹುದಾಗಿದೆ. ಒಂದು ಜೋಡಿ ಬಂದರೂ ಮದುವೆ ನಡೆಯಲಿದೆ ಎಂದು ಹೇಳಲಾಗಿದೆ.