Connect with us

LATEST NEWS

ಚಿಕನ್ ಬರ್ಗರ್ ಜೊತೆ ಜೀವಂತ ಹುಳುಗಳನ್ನು ಪಾರ್ಸೆಲ್ ಕಳುಹಿಸಿದ ಚಿಕ್‌ಕಿಂಗ್ ಸಂಸ್ಥೆ

ಮಂಗಳೂರು: ಮಂಗಳೂರಿನ ಹೊಟೇಲ್ ಒಂದು ಚಿಕನ್ ಬರ್ಗರ್ ಜೊತೆ ಜೀವಂತ ಹುಳುಗಳನ್ನು ಪಾರ್ಸೆಲ್ ಮಾಡಿ ಗ್ರಾಹಕರಿಕೆ ನೀಡಿದ್ದು, ಪಾರ್ಸೆಲ್ ಪಡೆದ ಮಹಿಳೆಯೊಬ್ಬರು ಆಘಾತಕ್ಕೊಳಗಾಗಿ ಸಂಸ್ಥೆಯ ವಿರುದ್ದ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.


ಲೇಡಿಹಿಲ್‌ನ ಸಲ್ಮಾ ಸಿಮ್ರನ್ ಕೆ. ಎಂಬವರು ಶನಿವಾರ ಚಿಕ್‌ಕಿಂಗ್’ ಸಂಸ್ಥೆಯಿಂದ ಚಿಕನ್ ಖಾದ್ಯ ಸಹಿತ ಬರ್ಗರ್ ಪಾರ್ಸೆಲ್‌ಗೆ ಆರ್ಡರ್ ಮಾಡಿದ್ದರು. ಬಳಿಕ ರಾತ್ರಿ 8 ಗಂಟೆ ಸುಮಾರಿಗೆ ಪಾರ್ಸೆಲ್ ಮನೆ ಬಾಗಿಲಿಗೆ ಬಂದಿದೆ. ನಂತರ ಸಂತ್ರಸ್ತೆ ಸಹಿತ ತಾಯಿ, ಮೊಮ್ಮಕ್ಕಳು ಅದೇ ಆಹಾರವನ್ನು ಅಲ್ಪ ಪ್ರಮಾಣದಲ್ಲಿ ಸೇವಿಸಿದ್ದಾರೆ.

 

ಈ ನಡುವೆ ಚಿಕನ್ ಖಾದ್ಯದಲ್ಲಿ ದಿಢೀರ್ ಹುಳು ಕಾಣಿಸಿಕೊಂಡಿದೆ. ಮನೆಯವರು ಆತಂಕಕೀಡಾಗಿದ್ದರು. ನಂತರ ಈ ಕುರಿತಂತೆ ಆಹಾರ ನೀಡಿದ ಚಿಕ್‌ಕಿಂಗ್ ಸಂಸ್ಥೆಗೆ ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಆದರೆ ಅವರು ಸರಿಯಾಗಿ ರೆಸ್ಪಾನ್ಸ್ ಮಾಡದ ಹಿನ್ನಲೆ ಸಲ್ಮಾ ಅವರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.