Connect with us

FILM

ಮಾಧ್ಯಮಗಳ ಮೇಲೆ ಗರಂ ಆದ ಸಾನ್ವಿ ಸುದೀಪ್ – ಮನುಷ್ಯತ್ವ ಇಲ್ಲದೆ ವಿಡಿಯೋ ಮಾಡುತ್ತಾ ಇದ್ದರು…!!

ಬೆಂಗಳೂರು ಅಕ್ಟೋಬರ್ 21: ಕನ್ನಡದ ನಟ ಸುದೀಪ್ ಅವರ ತಾಯಿ ಅಸೌಖ್ಯದಿಂದ ನಿಧನರಾಗಿದ್ದಾರೆ. ನಿನ್ನೆ ಸುದೀಪ್ ಅವರ ಮನೆಯ ಸುತ್ತಮುತ್ತ ಸೇರಿದ ಜನ ಸಾಗರ ಹಾಗೂ ಮಾಧ್ಯಮಗಳ ಕ್ಯಾಮರಾ ಕಿರಿಕಿರಿ ಕುರಿತಂತೆ ಸುದೀಪ್ ಮಗಳು ಸಾನ್ವಿ ಗರಂ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.


ಸುದೀಪ್ ತಾಯಿ ನಿಧನದ ಸುದ್ದಿ ಕೇಳಿ ಸಾವಿರಾರು ಜನರು ಸುದೀಪ್​ ಮನೆ ಮುಂದೆ ಜಮಾಯಿಸಿದ್ರು. ಕೆಲ ಜನರು ಫೋಟೋ, ವಿಡಿಯೋಗಳಿಗಾಗಿ ಮಾಡಿದ ಹುಚ್ಚಾಟಕ್ಕೆ ಸ್ವಾನಿ ಸಿಟ್ಟಾಗಿದ್ದಾರೆ. ಸಾವಿನ ಮನೆಯಲ್ಲೂ ಕೂಗಾಟ, ಚೀರಾಟ ಸರಿನಾ ಎಂದು ಪ್ರಶ್ನೆ ಮಾಡಿ ಪೋಸ್ಟ್ ಶೇರ್ ಮಾಡಿದ್ದಾರೆ.


ಇಂದು ನಮ್ಮ ಕುಟುಂಬಕ್ಕೆ ತುಂಬಾ ಕಷ್ಟದ ದಿನವಾಗಿತ್ತು. ನಮ್ಮ ಮನೆ ಮುಂದೆ ಸೇರಿದ್ದ ಜನರು ಜೋರಾಗಿ ಕಿರುಚುತ್ತಿದ್ರು. ನಮ್ಮ ಮುಖಕ್ಕೆ ಕ್ಯಾಮೆರಾ ಇಡಲು ಕಷ್ಟಪಡ್ತಿದ್ರು. ಕೆಲವರು ಮನುಷ್ಯತ್ವ ಇಲ್ಲದವರಂತೆ ನಡೆದುಕೊಂಡಿದ್ದಾರೆ. ನನ್ನ ತಂದೆ ಅವರ ತಾಯಿಗಾಗಿ ಕಣ್ಣೀರು ಹಾಕ್ತಿದ್ರು. ಆದ್ರೆ ಜನರು ನಮ್ಮನ್ನು ತಳ್ಳಿ-ನೂಕ್ಕಿದ್ದಾರೆ ಎಂದು ಸಾನ್ವಿ ಬರೆದಿದ್ದಾರೆ. ಅವರನ್ನು ಗೌರವದಿಂದ ಕಳುಹಿಸಲು ನಾವು ತುಂಬಾ ತೊಂದರೆಗೆ ಒಳಗಾಗುವಂತೆ ಆಯ್ತು. ನಾವು ನಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡು ಅಳುತ್ತಿದ್ದೇನೆ. ಆದ್ರೆ ಕೆಲ ಜನರು ಅವರು ಪೋಸ್ಟ್ ಮಾಡಬಹುದಾದ ರೀಲ್ಸ್​​ಗಳ ಬಗ್ಗೆ ಯೋಚಿಸಿ ತೊಂದರೆ ಕೊಟ್ಟಿದ್ದು ಎಷ್ಟು ಸರಿ ಎಂದು ಸಾನ್ವಿ ಇನ್ಸ್ಟಾ ಸ್ಟೋರಿಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಸುದೀಪ್ ಅವ​ರ ಜೆಪಿ ನಗರ ನಿವಾಸದಲ್ಲಿ ಸರೋಜ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅನೇಕ ಗಣ್ಯರು ಅಂತಿಮ ದರ್ಶನ ಪಡೆದ್ರು. ಅಂತಿಮಯಾತ್ರೆ ಬಳಿಕ ವಿಲ್ಸನ್ ಗಾರ್ಡನ್ ಚಿತಾಗಾರದ ಹೊರಗೆ ಸರೋಜ ಅವರ ಪಾರ್ಥಿವ ಶರೀರಕ್ಕೆ ಕುಟುಂಬಸ್ಥರು ಪೂಜೆ ಸಲ್ಲಿದ್ರು. ಮಗ ಸುದೀಪ್ ಅವರು ಅಂತ್ಯಕ್ರಿಯೆಯ ವಿಧಿವಿಧಾನ ನೆರವೇರಿಸಿದ್ರು.

ಅಮ್ಮನಿಗೆ ವಿದಾಯ ಹೇಳಿ ಬಾರದ ಮನಸ್ಸಿನಿಂದಲೇ ಚಿತಾಗಾರದಿಂದ ಹೊರಗೆ ಬಂದ ಸುದೀಪ್​ ಅವರು ಅಳುತ್ತಲೇ ಅಭಿಮಾನಿಗಳಿಗೆ ಕೈ ಮುಗಿದ್ರು. ಸುದೀಪ್​ ನೋಡಲು ಚಿತಾಗಾರದ ಬಳಿ ಅಭಿಮಾನಿಗಳು ಹರಿದು ಬಂದಿದ್ರು. ನೋವಿನಲ್ಲೂ ಸುದೀಪ್ ಅಭಿಮಾನಿಗಳತ್ತ ನೋಡಿ ಕೈ ಮುಗಿದಿದ್ದಾರೆ. ಅಳುತ್ತಾ ಕಾರು ಹತ್ತಿ ಮನೆ ಕಡೆ ತೆರಳಿದ್ದರು. ಖ್ಯಾತ ನಟನ ತಾಯಿ ಸಾವಿನಲ್ಲೂ ವೀವ್ಸ್ ಗಾಗಿ ಜನರು ಕೆಮರಾ ಗಳನ್ನ ಝೂಮ್ ಮಾಡಿ ತೋರಿಸಿದ್ದು, ಸರಿನಾ ಎಂದು ಸಾನ್ವಿ ಸುದೀಪ್ ಪ್ರಶ್ನೆ ಮಾಡಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *