Connect with us

    LATEST NEWS

    ಬರ್ತಡೇ ಕೇಕ್ ತಿಂದು ಬಾಲಕಿ ಸಾವನಪ್ಪಿದ ಪ್ರಕರಣ – ಕೇಕ್ ನಲ್ಲಿತ್ತು ಹೆಚ್ಚಿನ ಪ್ರಮಾಣ ಸ್ಯಾಕ್ರರಿನ್

    ಪಂಜಾಬ್ ಎಪ್ರಿಲ್ 23: ಹುಟ್ಟು ಹಬ್ಬದ ಕೇಕ್ ತಿಂದು ಬಾಲಕಿಯೊಬ್ಬಳು ಸಾವನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ವೈದ್ಯಕೀಯ ವರದಿ ಬಂದಿದ್ದು, ಅದರಲ್ಲಿ ಬಾಲಕಿಯ ಸಾವಿಗೆ ಕಾರಣ ತಿಳಿದು ಬಂದಿದೆ.


    ಹುಟ್ಟುಹಬ್ಬದ ದಿನವೇ ಕೇಕ್​ ತಿಂದು ಪಂಜಾಬ್​ನ 10 ವರ್ಷದ ಬಾಲಕಿ ಮಾನ್ವಿ ಸಾವನ್ನಪ್ಪಿದ್ದು ದೊಡ್ಡ ಸುದ್ದಿಯಾಗಿತ್ತು. ಆನ್ ಲೈನ್ ನಲ್ಲಿ ಕೇಕ್ ತರಿಸಿ ಬಾಲಕಿಯ ಬರ್ತಡೇ ಆಚರಿಸಿದ್ದ ಪ್ಯಾಮಿಲಿ , ಕೇಕ್ ತಿಂದ ಬಾಲಕಿ ಮರುದಿನ ಆಸ್ಪತ್ರೆಯಲ್ಲಿ ಸಾವನಪ್ಪಿದ್ದರು. ಇದೀಗ ಬಾಲಕಿಯ ಮರೋಣೋತ್ತರ ಪರೀಕ್ಷೆಯಲ್ಲಿ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ಹೌದು, ಬಾಲಕಿ ಮೃತಪಟ್ಟ ಬಳಿಕ ಕೇಕ್‌ ಅನ್ನು ಸಂಗ್ರಹಿಸಿದ ಆರೋಗ್ಯ ಅಧಿಕಾರಿಗಳು ಪರೀಕ್ಷೆಗೆ ಕಳುಹಿಸಿದ್ದರು. ಇದೀಗ ಅದೇ ಕೇಕ್​ನಲ್ಲಿ ಹೆಚ್ಚಿನ ಪ್ರಮಾಣದ ಸಿಹಿ ರುಚಿಯ ಸಿಂಥೆಟಿಕ್​ ಅನ್ನು ಬಳಸಲಾಗಿದೆ. ಹೀಗಾಗಿ ಅತಿಯಾಗಿ ಕೇಕ್​ ತಿಂದ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ.

    ಆರೋಗ್ಯ ಅಧಿಕಾರಿ, ಡಿಎಚ್‌ಒ ಡಾ ವಿಜಯ್ ಜಿಂದಾಲ್ ಎನ್‌ಡಿಟಿವಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ಸ್ಯಾಕ್ರರಿನ್ ಅನ್ನು ಆಹಾರ ಮತ್ತು ಪಾನೀಯಗಳಲ್ಲಿ ಬಳಸಿದರೆ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸಲು ಕಾರಣವಾಗಬಹುದು. ಹೀಗಾಗಿ ಸಾವುಗಳು ಕೂಡ ಸಂಭವಿಸಬಹುದು ಎಂದು ತಿಳಿಸಿದ್ದಾರೆ

    Share Information
    Advertisement
    Click to comment

    Leave a Reply

    Your email address will not be published. Required fields are marked *