Connect with us

  LATEST NEWS

  ಇದು ರೀಲ್ಸ್ ಅಲ್ಲ.. ಮದುವೆ ಮಂಟಪಕ್ಕೆ ನುಗ್ಗಿ ಖಾರದಪುಡಿ ಎರಚಿ ವಧು ಕಿಡ್ನಾಪ್​ ಯತ್ನ ವಿಫಲಗೊಳಿಸಿದ ವರ..!

  ವಿಜಯವಾಡ: ಇದು ಸಿನಿಮಾ ರೀಲ್ಸ್ ಅಲ್ಲ ಇದು ನೈಜ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ. ವಧುವನ್ನು ಕಿಡ್ನಾಪ್​ ಮಾಡುವ ಪ್ರಯತ್ನವನ್ನು ವರ ಮತ್ತು ಆತನ ಕಡೆಯವರು ವಿಫಲಗೊಳಿಸಿದ್ದಾರೆ.

   

  ಆಂಧ್ರದ ಕಡಿಯಂ ಗ್ರಾಮದ ವೆಂಕಟ ನಂದು ಮತ್ತು ಕರ್ನೂಲ್ ಜಿಲ್ಲೆಯ ಚಗಲಮರ್ರಿ ಮಂಡಲದ ಸ್ನೇಹಾ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಇಬ್ಬರು ಒಂದೇ ಕಾಲೇಜಿನ ವಿದ್ಯಾರ್ಥಿಗಳು. ತಮ್ಮ ಪ್ರೀತಿಗೆ ಹಿರಿಯರು ಒಪ್ಪಿಗೆ ನೀಡುವುದಿಲ್ಲ ಅಂತ ಓದುವಾಗಲೇ ಮದುವೆಯಾಗಿಬಿಡೋಣ ಎಂದು ನಿರ್ಧರಿಸಿದರು. ಅದೇ ರೀತಿ ಏಪ್ರಿಲ್​ 13ರಂದು ವಿಜಯವಾಡದ ದುರ್ಗಾ ದೇವಸ್ಥಾನದಲ್ಲಿ ವಿವಾಹವಾದರು.ಇದಾದ ಬಳಿಕ ವೆಂಕಟನಂದು ಅವರ ಮನೆಯಲ್ಲಿ ಈ ವಿಚಾರ ಗೊತ್ತಾಗಿ, ಇಬ್ಬರಿಗೂ ಶಾಸ್ತ್ರೋಕ್ತವಾಗಿ ಮದುವೆ ಮಾಡಲು ಹಿರಿಯರು ಒಪ್ಪಿದರು. ಏಪ್ರಿಲ್​ 21ರ ಭಾನುವಾರ ಮದುವೆ ಮಾಡುವುದಾಗಿ ವಧುಗಿನ ಪಾಲಕರಿಗೂ ಸಂದೇಶ ರವಾನಿಸಲಾಗಿತ್ತು. ಮದುವೆ ಸಮಾರಂಭದ ವಿಳಾಸವನ್ನೂ ನೀಡಿಲಾಗಿತ್ತು. ಈ ಕ್ರಮದಲ್ಲಿ ಮುಹೂರ್ತದ ವೇಳೆ ಫಂಕ್ಷನ್ ಹಾಲ್​ಗೆ ನುಗ್ಗಿದ ಸ್ನೇಹಾಳ ತಾಯಿ, ಸಹೋದರ ಮತ್ತು ಸೋದರಸಂಬಂಧಿಗಳು ಆಕೆಯನ್ನು ಮದುವೆ ಸ್ಥಳದಿಂದ ಬಲವಂತವಾಗಿ ಎಳೆದೊಯ್ಯಲು ಯತ್ನಿಸಿದರು. ಅಲ್ಲದೆ, ಆಕೆಯನ್ನು ತಡೆಯಲು ಬಂದವರ ಮೇಲೆ ಖಾರದಪುಡಿಯನ್ನು ಎರಚಿ, ಗಲಾಟೆ ಸಹ ಮಾಡಿದರು.ಆದರೆ, ಅಪಹರಣ ಯತ್ನವನ್ನು ವರ, ಆತನ ಕುಟುಂಬದವರು ಹಾಗೂ ಸ್ನೇಹಿತರು ವಿಫಲಗೊಳಿಸಿದ್ದಾರೆ. ಗಲಾಟೆಯಲ್ಲಿ ವರನ ಸ್ನೇಹಿತರೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಇದೀಗ ಸ್ನೇಹಾಳ ಕುಟುಂಬಸ್ಥರು ಹಲ್ಲೆ, ಅಪಹರಣ ಯತ್ನ ಮತ್ತು ಚಿನ್ನ ಕಳ್ಳತನ ಸೇರಿದಂತೆ ಹಲವಾರು ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದಾರೆ. ಮದುವೆಗೆ ಯಾಕೆ ವಿರೋಧ ವ್ಯಕ್ತಪಡಿಸಿದರು ಎಂಬುದಕ್ಕೆ ಕಾರಣ ತಿಳಿದುಬಂದಿಲ್ಲ. ಈ ಘಟನೆ ಕುರಿತು ಮಾತನಾಡಿದ ಕಡಿಯಂ ಸರ್ಕಲ್ ಇನ್ಸ್‌ಪೆಕ್ಟರ್ ಬಿ. ತುಳಸಿಧರ್, ವೀರಬಾಬು ಕುಟುಂಬದವರು ಸ್ನೇಹಾ ಕುಟುಂಬದ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ. ತನಿಖೆ ನಡೆಯುತ್ತಿದ್ದೆ ಎಂದಿದ್ದಾರೆ.

  Share Information
  Advertisement
  Click to comment

  You must be logged in to post a comment Login

  Leave a Reply