Connect with us

  LATEST NEWS

  ಮಲೇಷ್ಯಾ – ಆಗಸದಲ್ಲೆ ಮುಖಾಮುಖಿ ಡಿಕ್ಕಿಯಾದ ಹೆಲಿಕಾಪ್ಟರ್ – 10 ಮಂದಿ ಸಾವು

  ಮಲೇಷ್ಯಾ ಎಪ್ರಿಲ್ 23: ಮಲೇಷ್ಯಾ ನೌಕಾಪಡೆಯ ಎರಡು ಹೆಲಿಕಾಪ್ಟರ್‌ಗಳು ಹಾರಾಟದ ವೇಳೆ ಆಗಸದಲ್ಲೇ ಪರಸ್ಪರ ಡಿಕ್ಕಿ ಹೊಡೆದು ಪತನವಾದ ಘಟನೆ ನಡೆದಿದ್ದು, ಇದರಲ್ಲಿ 10 ಮಂದಿ ಸಾವನಪ್ಪಿದ್ದಾರೆ.


  ಪೆರಾಕ್​ನ ಲುಮುಟ್​ನಲ್ಲಿ ಎರಡು ರಾಯಲ್ ಮಲೇಷಿಯನ್ ನೌಕಾಪಡೆಯ ಹೆಲಿಕಾಪ್ಟರ್​ಗಳು ಪರಸ್ಪರ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದ್ದು, 10 ಮಂದಿ ಸಾವನ್ನಪ್ಪಿದ್ದಾರೆ. ಫ್ರೀ ಮಲೇಷ್ಯಾ ಟುಡೇ ವರದಿ ಪ್ರಕಾರ, ಪೆರಾಕ್ ಅಗ್ನಿಶಾಮಕ ಮತ್ತು ಪಾರುಗಾಣಿಕಾ ಇಲಾಖೆ ಈ ಘಟನೆಯನ್ನು ದೃಢಪಡಿಸಿದೆ. ಸ್ಥಳದಲ್ಲೇ 10 ಮಂದಿ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮೃತದೇಹಗಳನ್ನು ಹೆಲಿಕಾಪ್ಟರ್​ಗಳಿಂದ ಹೊರ ತೆಗೆಯುವ ಕಾರ್ಯಾಚರಣೆ ಮುಂದುವರೆದಿದೆ.

  Share Information
  Advertisement
  Click to comment

  You must be logged in to post a comment Login

  Leave a Reply