Connect with us

    National

    ಮದ್ಯಕ್ಕೆ ಆರ್ಡರ್ ಕೊಟ್ಟ ಮಾಜಿ ಪ್ರಧಾನಿ ಸಲಹೆಗಾರನಿಗೆ ಪಂಗನಾಮ ಹಾಕಿದ ಆನ್ ಲೈನ್ ಕಳ್ಳ……

    ನವದೆಹಲಿ, ಜೂನ್ 29: ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಮಾದ್ಯಮ ಸಲಹೆಗಾರ ಸಂಜಯ್ ಬಾರು ಆನ್ ಲೈನ್ ಕಳ್ಳನಿಂದ ಪಂಗನಾಮ ಹಾಕಿಸಿಕೊಂಡವರಾಗಿದ್ದಾರೆ. ಆನ್ ಲೈನ್ ಪಂಗನಾಮದ ದಂಧೆಗೆ ಸಂಬಂಧಿಸಿದಂತೆ ಪೋಲೀಸರು ಇದೀಗ ಅಖಿಬ್ ಜಾವೇದ್ ಎನ್ನುವ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.

    ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೋಲೀಸರು ಜೂನ್ 2 ರಂದು ಪ್ರಕರಣ ದಾಖಲಿಸಿಕೊಂಡಿದ್ದರು. ಆನ್ ಲೈನ್ ಮೂಲಕ ಮದ್ಯ ತರೆಸಿಕೊಳ್ಳಲು ತಯಾರಿ ನಡೆಸಿದ್ದ ಸಂಜಯ್ ಬಾರು ಅವರಿಗೆ ಲಾ ಕೇವ್ ವೈನ್ಸ್ ಅಂಡ್ ಸ್ಪಿರಿಟ್ ಎನ್ನುವ ಮದ್ಯದ ಶಾಪ್ ನ ಅಡ್ರೆಸ್ ಸಿಕ್ಕಿತ್ತು. ಇದರಲ್ಲಿದ್ದ ಪೋನ್ ನಂಬರ್ ಗೆ ಕಾಲ್ ಮಾಡಿ ಸಂಜಯ್ ಬಾರು ಮದ್ಯಕ್ಕೆ ಆರ್ಡರ್ ಮಾಡಿದ್ದರು. ಆ ಸಂದರ್ಭದಲ್ಲಿ ಕರೆ ಸ್ವೀಕರಿಸಿದ ವ್ಯಕ್ತಿ 24 ಸಾವಿರ ರೂಪಾಯಿಗಳನ್ನು ಆನ್ ಲೈನ್ ಪೇ ಮಾಡುವಂತೆ ಸೂಚಿಸಿದ್ದ ಎನ್ನಲಾಗಿದೆ. ಈ ಕಾರಣಕ್ಕಾಗಿ ಹಣವನ್ನು ಆನ್ ಲೈನ್ ನಲ್ಲಿ ನೀಡಲಾಗಿತ್ತು.

    ಆದರೆ ನಿಗದಿತ ಸಮಯದಲ್ಲಿ ಮದ್ಯ ಮನೆ ತಲುಪದೇ ಇದ್ದ ಕಾರಣ ಸಂಜಯ್ ಬಾರು ಮತ್ತೊಮ್ಮೆ ಆ ನಂಬರ್ ಗೆ ಕಾಲ್ ಮಾಡಿದ್ದಾರೆ. ಆದರೆ ಆ ಸಂದರ್ಭದಲ್ಲಿ ಮೊಬೈಲ್ ಸ್ವಿಚ್ ಆಗಿತ್ತು. ತಾನು ಮೋಸ ಹೋದೆ ಎಂದು ತಿಳಿದ ತಕ್ಷಣ ಸಂಜಯ್ ಬಾರು ದೆಹಲಿ ಪೋಲೀಸರಿಗೆ ದೂರು ನೀಡಿದ್ದು, ಇದೀಗ ಒರ್ವನನ್ನು ಪೋಲೀಸರು ವಶಕ್ಕೆ ಪಡೆದಿದ್ದು, ಇನ್ನುಳಿದವರಿಗಾಗಿ ಶೋಧ ನಡೆಸುತ್ತಿದ್ದಾರೆ. ದಿ ಆಕ್ಸಿಡೆಂಟಲ್ ಪ್ರೈ ಮಿನಿಷ್ಟರ್ ಪುಸ್ತಕದ ಮೂಲಕ ಡಾ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಅವರ ಮೇಲೆ ಇದ್ದ ಒತ್ತಡಗಳು ಹಾಗೂ ಕಾಂಗ್ರೇಸ್ ಹೈ ಕಮಾಂಡ್ ನ ನಿಲುವುಗಳ ಬಗ್ಗೆ ಬರೆದಿದ್ದರು. ಪುಸ್ತಕ ಪ್ರಕಟವಾಗುವ ಮೊದಲು ಭಾರೀ ವಿವಾದಕ್ಕೂ ಕಾರಣವಾಗಿತ್ತು.

    Share Information
    Advertisement
    Click to comment

    You must be logged in to post a comment Login

    Leave a Reply