ಉಡುಪಿ ಮನೆಯಂಗಳದಲ್ಲಿದ್ದ ಗಂಧದ ಮರ ಕತ್ತರಿಸಿ ಕದ್ದೊಯ್ದ ಕಳ್ಳರು

ಉಡುಪಿ ಅಕ್ಟೋಬರ್ 3:ಕಾಡಿನಲ್ಲಿದ್ದ ಗಂಧದ ಮರಗಳನ್ನು ಕದಿಯುತ್ತಿದ್ದ ಕಳ್ಳರು ಈಗ ನಾಡಿಗೂ ಲಗ್ಗೆ ಇಟ್ಟಿದ್ದು, ಮನೆಯಂಗಳಲ್ಲಿ ಇದ್ದ ಗಂಧದ ಮರವನ್ನು ಕತ್ತರಿಸಿ ಕಳ್ಳತನ ಮಾಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ.

ಉಡುಪಿಯ ನಗರದ ಅಂಬಲಪಾಡಿ ಮಹಾಕಾಳಿ ದೇವಸ್ಥಾನ ಪರಿಸರದ ಮನೆ ಆವರಣದಲ್ಲಿ ಬೆಳೆದಿದ್ದ ಗಂಧದ ಮರವನ್ನು ಮೂವರು ಕಳ್ಳರು ರಾತ್ರೋ ರಾತ್ರಿ ಕಡಿದು ಕೊಂಡೊಯ್ದಿದ್ದಾರೆ.

ಗಂಧದ ಮರ ಕದಿಯಲು ಸ್ಕೇಚ್ ಹಾಕಿರುವ ಕಳ್ಳರು ಹಗಲಿನಲ್ಲಿ ಅಂಗವಿಕಲರ ವೇಷ ಧರಿಸಿ ಭಿಕ್ಷೆ ಕೇಳುವ ನೆಪ ಮಾಡಿಕೊಂಡು ಮನೆಗೆ ಬಂದಿದ್ದು, ಆ ಸಮಯದಲ್ಲಿ ಮರವನ್ನು ನೋಡಿಕೊಂಡು ಹೋಗಿದ್ದಾರೆ. ನಂತರ ಅದೇ ದಿನ ರಾತ್ರಿ ಒಂದು ಗಂಟೆ ಸುಮಾರಿಗೆ ಇತರ ಇಬ್ಬರೊಂದಿಗೆ ಬಂದು ಮರಕಳ್ಳತನ ಮಾಡಿದ್ದಾನೆ. ಸದ್ದಿಲ್ಲದೆ ಗಂಧದ ಮರ ಉರುಳಿಸಿ, ಯಾರಿಗೂ ಸಂಶಯ ಬಾರದಂತೆ ಕ್ಷಣ ಮಾತ್ರದಲ್ಲಿ ಅದನ್ನು ತೆಗೆದುಕೊಂಡು ಹೋಗಿದ್ದಾರೆ. ಕಳ್ಳರು ಬಂದು ಮರ ಕಿತ್ತೊಯ್ದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ.

ಸುಮಾರು ಒಂದೂವರೆ ಲಕ್ಷರೂಪಾಯಿಯಷ್ಟು ಮೌಲ್ಯದ ಈ ಗಂಧದ ಗಿಡವನ್ನು ಮನೆತೋಟದಲ್ಲೇ ಬೆಳೆಸಲಾಗಿತ್ತು. ಮನೆಯಲ್ಲಿ ಜನರು ವಾಸವಿದ್ದರೂ ರಾಜಾರೋಷವಾಗಿ ಬಂದು ಚೋರರ ತಂಡ ಕೆಲಸ ಮುಗಿಸಿ ಹೋಗಿದ್ದಾರೆ.

Facebook Comments

comments