LATEST NEWS
ಕೊಲ್ಲೂರು ದೇವಸ್ಥಾನದಲ್ಲಿ ಸಲಾಂ ಆರತಿ ಎಂಬ ಆಚರಣೆ ಇಲ್ಲ – ಶಾಸಕ ಸುಕುಮಾರ್ ಶೆಟ್ಟಿ ಸ್ಪಷ್ಟನೆ
ಉಡುಪಿ ಅಕ್ಟೋಬರ್ 09: ರಾಜ್ಯ ಸರಕಾರ ರೈಲ್ವೇ ಮೈಸೂರು ಬೆಂಗಳೂರು ಎಕ್ಸ್ ಪ್ರೆಸ್ ಹೆಸರನ್ನು ಟಿಪ್ಪು ಎಕ್ಸ್ ಪ್ರೆಸ್ ನಿಂದ ಒಡೆಯರ್ ಎಕ್ಸ್ ಪ್ರೆಸ್ ಎಂದು ಬದಲಿಸಲು ಆದೇಶ ನೀಡಿದ ಬಳಿಕ ಕೊಲ್ಲೂರು ದೇವಳದ ಸಲಾಂ ಆರತಿ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಸಲಾಂ ಆರತಿ ಎಂದ ಧಾರ್ಮಿಕ ವಿಧಿ ವಿಧಾನ ದೇವಳದಲ್ಲಿ ಇಲ್ಲ ಎಂದು ಗ್ಗೆ ಸ್ಥಳೀಯ ಶಾಸಕರು ಸ್ಪಷ್ಠೀಕರಣ ನೀಡಿದ್ದಾರೆ.
ರಾಜ್ಯದ ಶ್ರೀಮಂತ ದೇಗುಲಗಳಲ್ಲಿ ಮುಂಚೂಣಿಯಲ್ಲಿರುವ ಕೊಲ್ಲೂರು ಮೂಕಾಂಬಿಕಾ ದೇವಳದಲ್ಲಿ ಸಲಾಂ ಆರತಿ ಎಂಬ ಧಾರ್ಮಿಕ ವಿಧಿ ನಡೆಯುತ್ತಿದೆ ಎಂದು ಈ ಹಿಂದೆ ವಿಶ್ವಹಿಂದೂ ಪರಿಷತ್ ಅಸಮಾಧಾನ ವ್ಯಕ್ತ ಪಡಿಸಿತ್ತು. ಅದಾದ ಬಳಿಕ ಈ ಬಗ್ಗೆ ದೇವಳದ. ಅರ್ಚಕರೇ ಸ್ಪಷ್ಟೀಕರಣ ನೀಡಿದ್ರು . ಪ್ರದೋಷ ಕಾಲದಲ್ಲಿ ನಡೆಯುವ ವಿಶೇಷ ಸೇವೆಗೆ ಸಲಾಂ ಆರತಿ ಎಂದು ಆಡು ಮಾತಿನಲ್ಲಿ ಜನ ಸಲಾಂ ಆರತಿ ಎಂದು ಕರೆಯುತ್ತಿದ್ದರು. ಆದ್ರೆ ದೇವಳದ ನಿತ್ಯಾನಿಷ್ಠಾನದ ಪ್ರಕಾರ ಅಂತಹ ಸಲಾಂ ಆರತಿ ಅನ್ನೋದು ಕೊಲ್ಲೂರು ದೇವಳದಲ್ಲಿ ಇಲ್ಲ ಎಂಬ ಬಗ್ಗೆ ಸ್ಪಷ್ಠೀಕರಣ ನೀಡಲಾಗಿತ್ತು.
ಆದರೆ ಇದೀಗ ಮತ್ತೆ ರಾಜ್ಯಾದ್ಯಂತ ಟಿಪ್ಪ ವಿಚಾರವಾಗಿ ಚರ್ಚೆ ಬಂದ ಹಿನಲ್ಲೆ ಕೊಲ್ಲೂರಿನ ದೇವಳದ ಸಲಾಂ ಆರತಿ ಬಗ್ಗೆ ಒಂದಷ್ಟು ಚರ್ಚೆ ಮತ್ತೆ ಪ್ರಾರಂಭವಾಗಿದೆ. ಆದರೆ ಇಂತಹ ಆಚರಣೆ ಕೊಲ್ಲೂರಿನಲ್ಲಿ ಇಲ್ಲ ಎಂದು ಕೊಲ್ಲೂರು ದೇವಸ್ಥಾನದ ಆಡಳಿತ ನಡೆಸಿರುವ ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.