LATEST NEWS
ಸೈಂಟ್ ಮೇರಿಸ್ ಗೆ ಪ್ರವಾಸಿ ಟೂರಿಸ್ಟ್ ಬೋಟ್ ಸ್ಥಗಿತ
ಸೈಂಟ್ ಮೇರಿಸ್ ಗೆ ಪ್ರವಾಸಿ ಟೂರಿಸ್ಟ್ ಬೋಟ್ ಸ್ಥಗಿತ
ಉಡುಪಿ, ಮೇ 17: ಮಲ್ಪೆ ಬೀಚ್ನಿಂದ ಹಾಗೂ ಮಲ್ಪೆ ಬಂದರಿನಿಂದ ಸೈಂಟ್ ಮೆರೀಸ್ ದ್ವೀಪಕ್ಕೆ ಪ್ರಯಾಣಿಸುವ ಬೋಟ್ ನ್ನು ನಿಲ್ಲಿಸಲಾಗಿದೆ.
ಮಲ್ಪೆ ಬೀಚ್ ನಿಂದ ಸೈಂಟ್ ಮೇರಿ ದ್ಪೀಪಕ್ಕೆ ತೆರಳುವ ಮತ್ತು ಮಲ್ಪೆ ಬೀಚ್ನಲ್ಲಿ ಜಲಕ್ರೀಡಾ ಚಟುವಟಿಕೆ ನಡೆಸುವ ಎಲ್ಲಾ ಪ್ರವಾಸಿ ಬೋಟ್ಗಳಿಗೆ ಪ್ರತಿ ವರ್ಷದಂತೆ ಮೇ 16 ರಿಂದ ಸೆಪ್ಟಂಬರ್ 15 ರ ವರೆಗೆ ಬೋಟ್ ಚಲಾಯಿಸಲು ಅನುಮತಿ ಇರುವುದಿಲ್ಲ ಹಾಗೂ ಬೋಟ್ ಚಲಾಯಿಸುವುದು ನಿಷಿದ್ದವಾಗಿರುತ್ತದೆ ಎಂದು ಮಲ್ಪೆ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
You must be logged in to post a comment Login