Connect with us

LATEST NEWS

ಸೈಂಟ್ ಮೇರಿಸ್ ದ್ವೀಪದಲ್ಲಿ ಡಿಎಸ್ಎಲ್ ಆರ್ ಕ್ಯಾಮರಾಗಳಿಗೆ ಮಾತ್ರ ಶುಲ್ಕ

ಉಡುಪಿ ಜನವರಿ 21: ಮಲ್ಪೆ ಅಭಿವೃದ್ಧಿ ಸಮಿತಿಯಿಂದ 2020ರ ಸಾಲಿನಲ್ಲಿ ಸೀವಾಕ್ ಪ್ರದೇಶ ಮತ್ತು ಸೈಂಟ್‌ಮೆರೀಸ್ ದ್ವೀಪ ಪ್ರದೇಶದ ನಿರ್ವಹಣೆ ಕುರಿತು ಕರೆಯಲಾದ ಟೆಂಡರಿನಲ್ಲಿ ದ್ವೀಪದಲ್ಲಿ ಕೈಗೊಳ್ಳುವ ಯಾವುದೇ ರೀತಿಯ ಚಿತ್ರೀಕರಣಕ್ಕೆ ಉಪಯೋಗಿಸುವಂತಹ (Commercial Activities like photo shoot) ಡಿ.ಎಸ್.ಎಲ್.ಆರ್ ಕ್ಯಾಮರಾಗಳಿಗೆ ಶುಲ್ಕ ವಿಧಿಸಿ ನಿರ್ವಹಣಾದಾರರಿಗೆ ಆದಾಯಗಳಿಸುವ ಬಗ್ಗೆ ಅವಕಾಶವಿರುತ್ತದೆ.

St.marys island , Malpe, Udupi, , Karnataka

ಹಾಗೂ ಇತರೆ ರೀತಿಯ ಕ್ಯಾಮರಗಳಾದ ಸೋನಿ ಹ್ಯಾಂಡಿ ಕ್ಯಾಮ್, ಕ್ಯಾನೋನ್ ಇ.ಒ.ಎಸ್, ಡಿಜಿಟಲ್ ಕ್ಯಾಮರಾ, ಸೋನಿ ಹೆಚ್.ಡಿ.ಆರ್.ಸಿ.ಎಕ್ಸ್ ಕ್ಯಾಮರಾಗಳನ್ನು ಮತ್ತು ಮೊಬೈಲ್‌ಗಳನ್ನು ಸೈಂಟ್‌ಮೆರೀಸ್ ದ್ವೀಪದಲ್ಲಿ ಬಳಸಲು ಯಾವುದೇ ನಿರ್ಬಂಧ ಇರುವುದಿಲ್ಲ. ಸೈಂಟ್‌ಮೆರೀಸ್ ದ್ವೀಪದಲ್ಲಿ ಪ್ರವಾಸಿಗರೊಂದಿಗೆ ಅನುಚಿತವಾಗಿ ವರ್ತಿಸಿದ ಸಿಬ್ಬಂದಿಯ ಮೇಲೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ.

ಸೈಂಟ್ಮೆರೀಸ್ ದ್ವೀಪದಲ್ಲಿ ಪ್ರವಾಸಿಗರಿಂದ ಕ್ಯಾಮರಾಗಳಿಗೆ ಪಡೆಯುವ ಶುಲ್ಕವನ್ನು ರದ್ದುಗೊಳಿಸುವಂತೆ ಹಲವಾರು ಕಡೆಗಳಿಂದ ಹಾಗೂ ಜಾಲತಾಣದಲ್ಲಿ ಆಗ್ರಹಿಸುತ್ತಿದ್ದು, ದ್ವೀಪದಲ್ಲಿ ಯಾವುದೇ ರೀತಿಯ ಚಿತ್ರೀಕರಣಕ್ಕೆ ಉಪಯೋಗಿಸುವಂತಹ ಡಿ.ಎಸ್.ಎಲ್.ಆರ್ ಕ್ಯಾಮರಾಗಳಿಗೆ ಪ್ರವಾಸಿಗರಿಂದ ಶುಲ್ಕ ವಸೂಲಿ ಮಾಡುವ ಕುರಿತು ಮರು ಪರಿಶೀಲಿಸಲಾಗುವುದು ಹಾಗೂ ಇತರೆ ಕ್ಯಾಮರಾಗಳಿಗೆ ದ್ವೀಪದಲ್ಲಿ ಉಪಯೋಗಿಸಲು ಯಾವುದೇ ನಿರ್ಬಂಧ ಇರುವುದಿಲ್ಲವೆಂದು ಉಡುಪಿ ನಗರಸಭೆಯ ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *