Connect with us

LATEST NEWS

ಸೈಬ್ರಕಟ್ಟೆ – ಸರಣಿ ಅಪಘಾತಕ್ಕೆ ಓರ್ವ ಬಲಿ..ಇಬ್ಬರು ಗಂಭೀರ

ಬ್ರಹ್ಮಾವರ ಡಿಸೆಂಬರ್ 5: ಮೀನು ಸಾಗಾಟದ ಗೂಡ್ಸ್ ಆಟೋ , ಕಾರು ಹಾಗೂ ಬೈಕ್ ನಡುವೆ ನಡೆದ ಸರಣಿ ಅಪಘಾತದಲ್ಲಿ ಓರ್ವ ಸಾವನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬ್ರಹ್ಮಾವರ ತಾಲೂಕು ಸೈಬ್ರಕಟ್ಟೆಯಲ್ಲಿ ಸಮೀಪ ನಡೆದಿದೆ.


ಮೃತರನ್ನು ಮೀನು ಸಾಗಾಟದ ಗಾಡಿಯಲ್ಲಿದ್ದ ಮಧುವನ ನಿವಾಸಿ ಸುರೇಶ ಮರಕಾಲ ಎಂದು ಗುರುತಿಸಲಾಗಿದೆ. ಸಹ ಸವಾರ ರಾಜು ಮರಕಾಲ ಹಾಗೂ ಬೈಕ್ ಸವಾರ ಶಿರಿಯಾರ ನಿವಾಸಿ ಸುಬ್ರಹ್ಮಣ್ಯ ಕುಲಾಲ್ ತಿವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೀನು ತುಂಬಿಕೊಂಡು ಸೈಬ್ರಕಟ್ಟೆ ಕಡೆ ಬರುತ್ತಿದ್ದ ಅಫೆ ಗೂಡ್ಸ್ ವಾಹನ ಜೆಸಿಬಿಯನ್ನು ಓವರ್ ಟೆಕ್ ಮಾಡುವ ಭರದಲ್ಲಿ ಬಾರಕೂರು ಕಡೆ ಬರುತ್ತಿದ್ದ ಸ್ವಿಪ್ಟ್ ಕಾರಿಗೆ ಢಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಮೀನು ತುಂಬಿದ ವಾಹನದ ಎಡಭಾಗದಲ್ಲಿ ಕುಳಿತಿದ್ದ ಸುರೇಶ ಮರಕಾಲ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇದೇ ವೇಳೆ ನಡುವೆ ಬೈಕ್ ಒಂದು ಸಿಲುಕಿಕೊಂಡಿದ್ದು, ಬೈಕ್ ಸವಾರನಿಗೆ ಕಾಲಿಗೆ ತೀವ್ರವಾದ ಪೆಟ್ಟಾಗಿದೆ. ಕಾರಿನಲ್ಲಿದ್ದ ಇಬ್ಬರೂ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Click to comment

You must be logged in to post a comment Login

Leave a Reply