DAKSHINA KANNADA
ಡಾ.ಅಮೃತ ಸೋಮೇಶ್ವರ್ ಗೆ ಭಾಷಾ ಸಮ್ಮಾನ್ ಗೌರವ
ಮಂಗಳೂರು,ಆಗಸ್ಟ್ 31 : ಹಿರಿಯ ಸಾಹಿತಿ ಡಾ. ಅಮೃತ ಸೋಮೇಶ್ವರ್ ಭಾಷಾ ಸಮ್ಮಾನ್ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ತುಳು ಭಾಷೆ ಹಾಗೂ ಸಾಹಿತ್ಯಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಖ್ಯಾತ ತುಳು ವಿದ್ವಾಂಸ ಹಾಗೂ ಬರಹಗಾರ ಡಾ ಅಮೃತ್ ಸೋಮೇಶ್ವರ್ ಅವರಿಗೆ 2016 ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾ ಸಮ್ಮಾನ್ ಗೌರವ ಲಭಿಸಿದೆ .ಡಾ. ಅಮೃತ ಸೋಮೇಶ್ವರ ಅವರ ಹೆಸರನ್ನು ಹಿರಿಯ ಸಾಹಿತಿ ಡಾ .ಚಿನ್ನಪ್ಪ ಗೌಡ ,ಪ್ರೊ. ಚಂದ್ರಕಲಾ ನಂದಾವರ ಮತ್ತು ಜಾನಕಿ ಬ್ರಹ್ಮಾವರ ಅವರನ್ನೊಳಗೊಂಡ ಆಯ್ಕೆ ಸಮಿತಿ ಸರ್ವಾನುಮತದಿಂದ ಭಾಷಾ ಸನ್ಮಾನ ಗೌರವಕ್ಕೆ ಆಯ್ಕೆ ಮಾಡಿದೆ .ತುಳು ಭಾಷೆ ,ಸಂಸ್ಕೃತಿ ಹಾಗೂ ತುಳು ಭಾಷೆಯ ಸಂಶೋಧನೆ, ಭಾಷಾ ಅಭಿವೃದ್ಧಿಗೆ ಡಾ. ಅಮೃತ ಸೋಮೇಶ್ವರ ಅಪಾರ ಕೊಡುಗೆ ನೀಡಿದ್ದಾರೆ. ತುಳು ಭಾಷೆಯಲ್ಲಿರುವ ತಮ್ಮ ಹಲವಾರು ಕೃತಿಗಳನ್ನು ಸೋಮೇಶ್ವರ್ ಕನ್ನಡಕ್ಕೆ ಅನುವಾದಿಸಿದ್ದಾರೆ . 7 ತುಳು ನಾಟಕಗಳನ್ನು ಬರೆದಿರುವ ಸೋಮೇಶ್ವರ್ ಅವರ ತಂಬಿಲಾ ಮತ್ತು ರಂಜಿತಾ ಪ್ರಮುಖ ಕಾವ್ಯ ಸಂಕಲನಗಳು .ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ,ಕನ್ನಡ ಸಾಹಿತ್ಯ ಪರಿಷತ್ ಶತಮಾನೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಸೋಮೇಶ್ವರ ಅವರನ್ನು ಅರಸಿ ಬಂದಿವೆ .
ಪ್ರಸ್ತುತ 2016 ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾ ಸಮ್ಮಾನ್ ಗೌರವಕ್ಕೂ ಆಯ್ಕೆ ಮಾಡಲಾಗಿದೆ .ಈ ಕುರಿತು ಡಾ ಅಮೃತ ಸೋಮೇಶ್ವರ ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾ ಸಮ್ಮಾನ್ ಗೌರವಕ್ಕೆ ಆಯ್ಕೆ ಮಾಡಿರುವುದು ಸಂತಸ ತಂದಿದೆ. ಆದರೆ ಆ ಮಟ್ಟದ ಸಾಧನೆ ನಾನೇನು ಮಾಡಿಲ್ಲ .ಆದರೂ ಭಾಷಾ ಸನ್ಮಾನಕ್ಕೆ ಆಯ್ಕೆ ಮಾಡಿರುವುದುಕ್ಕೆ ಕೃತಜ್ಞತೆ ಹೇಳುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.
You must be logged in to post a comment Login