LATEST NEWS
ಕಾಣೆಯಾಗಿದ್ದ ತಂದೆ ಮಗಳು ಶವವಾಗಿ ಬಾವಿಯಲ್ಲಿ ಪತ್ತೆ
ಉಡುಪಿ, ಆಗಸ್ಟ್ 31 : ಮನೆಯಿಂದ ಕಾಣೆಯಾಗಿದ್ದ ತಂದೆ ಮತ್ತು ಮಗಳ ಶವ ಇಂದು ಬಾವಿಯಲ್ಲಿ ಪತ್ತೆಯಾಗಿರುವ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ಉಡುಪಿ ಹೊರವಲಯದ ಮಲ್ಪೆಯ ಕೊಡವೂರು ಎಂಬಲ್ಲಿನ ನಿವಾಸಿ 37 ವರ್ಷದ ಶರತ್ ಹಾಗೂ 8 ವರ್ಷದ ಮಗಳು ಕನ್ನಿಕಾ ನಿನ್ನೆ ಸಂಜೆಯಿಂದ ಕಾಣೆಯಾಗಿದ್ದರು . ಮನೆಯಿಂದ ಏಕಾಎಕಿ ಕಾಣೆಯಾದ ತಂದೆ ಮತ್ತು ಮಗಳಿಗಾಗಿ ಸ್ಥಳೀಯರು, ಕುಟುಂಬಸ್ಥರು, ಸ್ನೇಹಿತರು ಎಲ್ಲೆಡೆ ಹುಡುಕಾಡಿದ್ದಾರೆ. ಆದರೆ ಎಲ್ಲಿಯೂ ಶರತ್ ಹಾಗೂ ಕನ್ನಿಕಾ ಪತ್ತೆಯಾಗಿರಲಿಲ್ಲ. ಆರದೆ ಇಂದು ಬೆಳಗ್ಗೆ ಕೊಡವೂರಿನ ಮನೆಯ ಸಮೀಪದ ಬಾವಿಯೊಂದರಲ್ಲಿ ಇಬ್ಬರ ಶವಗಳು ಪತ್ತೆಯಾಗಿವೆ. ಈ ಘಟನೆ ಕುರಿತು ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ತನಿಖೆ ನಡೆಸಲಾಗುತ್ತಿದೆ. ಕಳೆದ ಹಲವಾರು ದಿನಗಳಿಂದ ಶರತ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗಿದೆ.
You must be logged in to post a comment Login