Connect with us

    LATEST NEWS

    ಶಬರಿಮಲೆಗೆ ಮಹಿಳೆಯರ ಪ್ರವೇಶ – 12 ರಂದು ಮರು ಪರಿಶೀಲನಾ ಅರ್ಜಿ ವಿಚಾರಣಗೆ ದಿನಾಂಕ ನಿರ್ಧಾರ

    ಕಾಸರಗೋಡು ಅಕ್ಟೋಬರ್ 07 : ಶಬರಿಮಲೆ ಕ್ಷೇತ್ರಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ ಮರು ಪರಿಶೀಲನಾ ಅರ್ಜಿ ವಿಚಾರಣೆ ಯಾವಾಗ ಆರಂಭ ಎಂಬ ಬಗ್ಗೆ ಸುಪ್ರೀಂ ಕೋರ್ಟ್ ಅಕ್ಟೋಬರ್ 12ರಂದು ನಿರ್ಧರಿಸಲಿದೆ. ಸಂವಿಧಾನ ಪೀಠಗಳ ಪರಿಗಣನೆಯಲ್ಲಿರುವ ಪ್ರಕರಣಗಳನ್ನು ಮುಂದಿನ ವಾರ ಪಟ್ಟಿ ಮಾಡಲಾಗುವುದು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಶುಕ್ರವಾರ ತಿಳಿಸಿದ್ದಾರೆ.


    ಐವರು ಸದಸ್ಯರ ಸಂವಿಧಾನ ನ್ಯಾಯಪೀಠ ವಿವಿಧ ವಿಷಯಗಳ ವಿಚಾರಣೆಯನ್ನು ಪೂರ್ಣಗೊಳಿಸಿ ತೀರ್ಪು ನೀಡಲಿದೆ. ಅದಾದ ಬಳಿಕ 7, 9 ಸದಸ್ಯರ ನ್ಯಾಯಪೀಠದ ಪರಿಗಣನೆಯಲ್ಲಿರುವ ಪ್ರಕರಣಗಳನ್ನು ಶೀಘ್ರವೇ ವಿಚಾರಣೆ ನಡೆಸಲಾಗುವುದು ಎಂದು ಇನ್ನೊಂದು ಪ್ರಕರಣವನ್ನು ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ತಿಳಿಸಿದ್ದಾರೆ.


    ಶಬರಿಮಲೆಗೆ ಮಹಿಳೆಯರ ಪ್ರವೇಶ ಪ್ರಕರಣ 9 ಸದಸ್ಯರ ನ್ಯಾಯಪೀಠದ ಪರಿಶೀಲನೆಯಲ್ಲಿದೆ. ವಿವಿಧ ಪ್ರಕರಣಗಳು ಈ ಪೀಠದ ಪರಿಗಣನೆಗೆ ಬಂದಾಗ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ ಪ್ರಕರಣವನ್ನೂ ಸೇರಿಸಲಾಗುವುದು ಎಂದು ಸೂಚಿಸಲಾಗಿದೆ. ಈ ಮೊದಲು 7 ಸದಸ್ಯರ ಪೀಠದ ಪರಿಗಣನೆಗೆ ಬಂದಿದ್ದ ಪ್ರಕರಣದ ವಿಚಾರಣೆ ಮುಗಿಸಿ ತೀರ್ಪನ್ನು ಮುಂದೂಡಲಾಗಿತ್ತು. ಇನ್ನೂ ಕೆಲವು ಅರ್ಜಿಗಳು ಪೀಠದ ಮುಂದೆ ಬಾಕಿ ಇವೆ. ಈ ವಿಷಯದಲ್ಲಿ ವಾದಗಳನ್ನು ಪೂರ್ಣಗೊಳಿಸಿದ ಬಳಿಕ 9 ಸದಸ್ಯರ ನ್ಯಾಯಪೀಠದ ಮುಂದೆ ಇರುವ ಪ್ರಕರಣಗಳತ್ತ ಸುಪ್ರೀಂ ಕೋರ್ಟ್ ಮುಂದುವರಿಯಲಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *