LATEST NEWS
ಶಬರಿಮಲೆ ದೇವಸ್ಥಾನ ಶುದ್ದೀಕರಣ ನಂತರ ದೇವಸ್ಥಾನದ ಬಾಗಿಲು ತೆರೆದ ಅರ್ಚಕರು
ಶಬರಿಮಲೆ ದೇವಸ್ಥಾನ ಶುದ್ದೀಕರಣ ನಂತರ ದೇವಸ್ಥಾನದ ಬಾಗಿಲು ತೆರೆದ ಅರ್ಚಕರು
ಕೇರಳ ಜನವರಿ 2: ಶಬರಿಮಲೆಗೆ ಸನ್ನಿಧಾನಕ್ಕೆ ಇಬ್ಬರು 40 ವರ್ಷ ಮಹಿಳೆಯರು ಪ್ರವೇಶಿಸಿದ ಹಿನ್ನಲೆಯಲ್ಲಿ ಶಬರಿಮಲೆ ಸನ್ನಿಧಾನವನ್ನು ಶುದ್ದೀಕರಣಕ್ಕಾಗಿ ಮುಚ್ಚಲಾಗಿದ್ದು ಈಗ ಶುದ್ದೀಕರಣದ ನಂತರ ದೇವಸ್ಥಾನದ ಬಾಗಿಲನ್ನು ಮತ್ತೆ ತೆರೆಯಲಾಗಿದ್ದು. ಭಕ್ತಾಧಿಗಳಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಕೇರಳ ಮೂಲದ ಬಿಂದು(42), ಸಿಪಿಐ(ಎಂಎಲ್) ಕಾರ್ಯಕರ್ತೆ ಕನಕದುರ್ಗ ಎಂಬುವರು ಇಂದು ಬೆಳಿಗ್ಗೆ ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶಿಸಿ ದೇವರ ದರ್ಶನ ಪಡೆದಿದ್ದರು. ಈ ಹಿನ್ನಲೆಯಲ್ಲಿ ದೇವಸ್ಥಾನವನ್ನು ಶುದ್ದೀಕರಣಕ್ಕಾಗಿ ಕೆಲಕಾಲ ಬಂದ್ ಮಾಡಲಾಗಿತ್ತು.
ಪಂದಳ ರಾಜ ವಂಶಸ್ಥರ ಆದೇಶದ ಮೇರೆಗೆ ದೇವಸ್ಥಾನವನ್ನು ಶುದ್ದೀಕರಣಕ್ಕಾಗಿ ಶಬರಿಮಲೆಯ ಪ್ರಧಾನ ಅರ್ಚಕರು ಕೆಲಕಾಲ ಬಾಗಿಲು ಮುಚ್ಚಿದ್ದರು. ಈಗ ಶುದ್ದೀಕರಣ ಕಾರ್ಯ ಪೂರ್ಣಗೊಂಡಿದ್ದು ಮತ್ತೆ ದೇವಾಲಯದ ಬಾಗಿಲು ತೆರೆಯಲಾಗಿದ್ದು, ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ.
ಈ ನಡುವೆ ಇಬ್ಬರ ಮಹಿಳೆಯರ ಪ್ರವೇಶದ ಕುರಿತಂತೆ ಮಾತನಾಡಿದ ಪಂದಳ ರಾಜವಂಶಸ್ಥ ಶಶಿ ವರ್ಮಾ ಇಬ್ಬರು ಮಹಿಳೆಯರ ಪ್ರವೇಶದಿಂದಾಗಿ ಅಯ್ಯಪ್ಪ ಸ್ವಾಮಿ ಸನ್ನಿಧಿ ಅಪವಿತ್ರಗೊಂಡಿದೆ. ನಾವು ಅನಾದಿಕಾಲದದಿಂದ ಪಾಲಿಸಿಕೊಂಡು ಬಂದಿರುವ ಸಂಪ್ರದಾಯಗಳನ್ನು ಇನ್ನೊಬ್ಬರಿಗಾಗಿ ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.