Connect with us

    LATEST NEWS

    ಮಹಿಳೆಯರ ಪ್ರವೇಶದ ಹಿನ್ನಲೆ ಶುದ್ದೀಕರಣಕ್ಕಾಗಿ ಶಬರಿಮಲೆ ದೇವಸ್ಥಾನ ಬಂದ್ ?

    ಮಹಿಳೆಯರ ಪ್ರವೇಶದ ಹಿನ್ನಲೆ ಶುದ್ದೀಕರಣಕ್ಕಾಗಿ ಶಬರಿಮಲೆ ದೇವಸ್ಥಾನ ಬಂದ್ ?

    ಕೇರಳ ಜನವರಿ 2: ಶಬರಿಮಲೆಗೆ ಸನ್ನಿಧಾನಕ್ಕೆ ಇಬ್ಬರು 40 ವರ್ಷ ಮಹಿಳೆಯರು ಪ್ರವೇಶಿಸಿ ಹಿನ್ನಲೆಯಲ್ಲಿ ಶಬರಿಮಲೆ ಸನ್ನಿಧಾನವನ್ನು ಶುದ್ದೀಕರಣಕ್ಕಾಗಿ ಮುಚ್ಚಲಾಗಿದೆ. ಸುಮಾರು 1 ಗಂಟೆಗಳ ಕಾಲ ಈ ಶುದ್ದೀಕರಣ ನಡೆಯಲಿದೆ ಎಂದು ಹೇಳಲಾಗಿದ್ದು. ನಂತರ ದೇವಸ್ಥಾನ ಮತ್ತೆ ತೆರೆಯಲಾಗುವುದು ಎಂದು ಹೇಳಲಾಗಿದೆ.

    ಕೇರಳ ಮೂಲದ ಬಿಂದು(42), ಸಿಪಿಐ(ಎಂಎಲ್​​) ಕಾರ್ಯಕರ್ತೆ ಕನಕದುರ್ಗ ಎಂಬುವರು ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶಿಸಿ ದೇವರ ದರ್ಶನ ಪಡೆದಿದ್ದಾರೆ. ನಿನ್ನೆ ಮಧ್ಯರಾತ್ರಿಯೇ ಶಮರಿಮಲೆ ಹತ್ತಲು ಶುರು ಮಾಡಿದ ಇಬ್ಬರು ಇಂದು ಬೆಳಿಗ್ಗೆ 3.45 ಕ್ಕೆ ದೇವಸ್ಥಾನ ತಲುಪಿ ಅಯ್ಯಪ್ಪನ ದರ್ಶನ ಪಡೆದಿದ್ದಾರೆ.

    ಈ ಹಿನ್ನಲೆಯಲ್ಲಿ ಇಂದು ಶಬರಮಲೆ ದೇವಸ್ಥಾನದ ಮುಖ್ಯ ತಂತ್ರಿಗಳ ಸಭೆ ನಡೆಸಲಾಗಿದ್ದು, ಮಹಿಳೆಯರ ಪ್ರವೇಶದ ಹಿನ್ನಲೆಯಲ್ಲಿ ದೇವಸ್ಥಾನದ ಶುದ್ದೀಕರಣಕ್ಕಾಗಿ ಶಬರಿಮಲೆಯನ್ನು ಮುಚ್ಚಲು ನಿರ್ಧರಿಸಲಾಗಿದೆ. ಸುಮಾರು 1 ಗಂಟೆಯ ಕಾಲ ಶುದ್ದೀಕರಣ ನಡೆಯಲಿದ್ದು, ಸನ್ನಿಧಾನದ ಶುದ್ದೀಕರಣದ ನಂತರ ದೇವಾಲಯದ ಬಾಗಿಲನ್ನು ತೆಗೆಯಲಾಗುವುದು ಎಂದು ಹೇಳಲಾಗಿದೆ.

    ಈ ನಡುವೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ 40 ವರ್ಷದ ಇಬ್ಬರು ಮಹಿಳೆಯರು ಅಯ್ಯಪ್ಪ ದರ್ಶನ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ. ಈ ಮೂಲಕ ಶತಮಾನಗಳ ಸಂಪ್ರದಾಯವನ್ನು ಮುರಿಯಲು ಇಬ್ಬರು ಮಹಿಳೆಯರು ಯಶಸ್ವಿಯಾಗಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply