KARNATAKA
ಶಬರಿಮಲೆ ಮಕರಜ್ಯೋತಿ ಯಾತ್ರೆ ಪ್ರಾರಂಭ ಯಾತ್ರೆ
ಶಬರಿಮಲೆ ಡಿಸೆಂಬರ್ 30: ಮಂಡಲ ಮಹೋತ್ಸವ ಬಳಿಕ ಮಕರಜ್ಯೋತಿ ಯಾತ್ರೆಗಾಗಿ ಇಂದು ಡಿಸೆಂಬರ್ 30 ರಂದು ಶಬರಿಮಲೆ ದೇವಾಲಯ ಭಕ್ತರಿಗೆ ತೆರೆಯಲಿದೆ.
ತಂತ್ರಿ ಕಂಠರಾರ್ ರಾಜೀವರ್ ಉಪಸ್ಥಿತಿಯಲ್ಲಿ ಪ್ರಧಾನ ಅರ್ಚಕ ಎಸ್.ಅರುಣ್ ಕುಮಾರ್ ನಂಬೂದಿರಿ ದೇಗುಲದ ಬಾಗಿಲು ತೆರೆದು ದೀಪ ಬೆಳಗುವರು. ಮಾಳಿಗಪ್ಪುರಂ ದೇಗುಲ ತೆರೆಯಲು ಪ್ರಧಾನ ಅರ್ಚಕ ವಾಸುದೇವನ್ ನಂಬೂದಿರಿ ಅವರಿಗೆ ಕೀಲಿ ಕೈ ಹಸ್ತಾಂತರಿಸಲಾಗುವುದು. 18 ಮೆಟ್ಟಿಲ ಬಳಿಯ ಕುಂಡಕ್ಕೆ ಅಗ್ನಿಸ್ಪರ್ಶ ನೀಡಿದ ಬಳಿಕ ಭಕ್ತರಿಗೆ 18 ಮೆಟ್ಟಿಲೇರಿ ಅಯ್ಯಪ್ಪ ದರ್ಶನಕ್ಕೆ ಅನುಮತಿ ನೀಡಲಾಗುವುದು. ಡಿಸೆಂಬರ್ 31ರ ಮುಂಜಾನೆ 3ರಿಂದ ಮಕರಜ್ಯೋತಿ ಪೂಜೆ ಆರಂಭವಾಗಲಿದೆ.
ಜನವರಿ 13ರಂದು ಪಂಪಾದಲ್ಲಿ ದೀಪೋತ್ಸವ,ಜನವರಿ 14ರಂದು ಸಂಜೆ 5ಕ್ಕೆ ತಿರುವಾಭರಣ ಘೋಷಯಾತ್ರೆ ಶರಂಗುತ್ತಿಗೆ ಆಗಮನ, ಮಕರ ಸಂಕ್ರಮಣ ಪೂಜೆ, ಸಂಜೆ 6.30ಕ್ಕೆ ಅಯ್ಯಪ್ಪನಿಗೆ ತಿರುವಾಭರಣ ತೊಡಿಸಿ ದೀಪಾರಾಧನೆ, ಮಕರ ನಕ್ಷತ್ರ ಗೋಚರಿಸಿದ ಬಳಿಕ ಮಕರಜ್ಯೋತಿ ದರ್ಶನ, ಜನವರಿ 18ರಂದು ಯಾತ್ರೆಯ ಋುತುವಿನ ಕೊನೆಯ ತುಪ್ಪಾಭಿಷೇಕ, ರಾಜ ಪ್ರತಿನಿಧಿಯ ಕಳಶಾಭಿಷೇಕ, ರಾತ್ರಿ ಮಾಳಿಗಪ್ಪುರಂನಿಂದ ಶರಂಗುತ್ತಿಗೆ ಮೆರವಣಿಗೆ ನಡೆಯಲಿದೆ.