LATEST NEWS
ರಷ್ಯಾ ದಾಳಿಯಲ್ಲಿ ಉಕ್ರೇನ್ ನ 137 ನಾಗರಿಕರು ಮತ್ತು ಸೇನಾ ಸಿಬ್ಬಂದಿ ಸಾವು
ಉಕ್ರೇನ್ : ಉಕ್ರೇನ್ ಮತ್ತು ರಷ್ಯಾ ನಡುವೆ ನಡೆಯುತ್ತಿರುವ ಯುದ್ದದಲ್ಲಿ ಅಪಾರ ಸಾವು ನೋವು ಸಂಭವಿಸಿದ್ದು, ಉಕ್ರೇನ್ 137 ಮಂದಿ ನಾಗರೀಕರು ಮತ್ತು ಸೇನಾ ಸಿಬ್ಬಂದಿ ಸಾವನಪ್ಪಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿದ್ದಾರೆ.
ಶುಕ್ರವಾರದ ಬಿಡುಗಡೆ ಮಾಡಿರುವ ವಿಡಿಯೊ ಹೇಳಿಕೆಯಲ್ಲಿ ಅವರು ಮೃತ ಸೈನಿಕರನ್ನು ಹೀರೋಗಳು ಎಂದು ಕರೆದಿದ್ದಾರೆ. ದಾಳಿಯಲ್ಲಿ ನೂರಾರು ಮಂದಿ ಸೈನಿಕರು ಗಾಯಗೊಂಡಿದ್ದಾರೆ ಎಂದು ಅವರು ಹೇಳಿದರು. ಮಿಲಿಟರಿ ಮೇಲೆ ಮಾತ್ರ ದಾಳಿ ಮಾಡುವುದಾಗಿ ಹೇಳಿದ್ದ ರಷ್ಯಾ ನಾಗರಿಕ ತಾಣಗಳ ಮೇಲೂ ಸಹ ದಾಳಿ ನಡೆಸುತ್ತಿದೆ ಎಂದು ಹೇಳಿದ್ದಾರೆ.
ರಷ್ಯಾ ಸೇನೆ ಜನರನ್ನು ಕೊಲ್ಲುತ್ತಿದೆ ಮತ್ತು ಶಾಂತಿಯುತ ನಗರಗಳನ್ನು ಮಿಲಿಟರಿ ಗುರಿಗಳಾಗಿ ಪರಿವರ್ತಿಸುತ್ತಿದೆ. ಇದು ರಷ್ಯಾದ ದೊಡ್ಡ ಮೋಸ, ಎಂದಿಗೂ ಇದನ್ನು ಕ್ಷಮಿಸುವುದಿಲ್ಲ’ ಝೆಲೆನ್‌ಸ್ಕಿ ಕಿಡಿಕಾರಿದ್ದಾರೆ.
ರಷ್ಯಾ ಈಗಾಗಲೇ ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರವನ್ನು ರಷ್ಯಾದ ಪಡೆಗಳು ವಶಪಡಿಸಿಕೊಂಡಿದೆ ಎಂದು ಉಕ್ರೇನ್ ಅಧ್ಯಕ್ಷೀಯ ಕಚೇರಿಯ ಸಲಹೆಗಾರ ಮೈಖೈಲೊ ಪೊಡೊಲ್ಯಾಕ್ ಹೇಳಿದ್ದಾರೆ.