DAKSHINA KANNADA
ನವರಾತ್ರಿ ಹಿನ್ನಲೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಮಾನ್ನ ಸೇವೆ

ನವರಾತ್ರಿ ಹಿನ್ನಲೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಮಾನ್ನ ಸೇವೆ
ಪುತ್ತೂರು ಅಕ್ಟೋಬರ್ 19: ನವರಾತ್ರಿ ಹಿನ್ನಲೆಯಲ್ಲಿ ದಕ್ಷಿಣಕನ್ನಡ ಭಾರತದ ಹೆಸರಾತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ದೇವರಿಗೆ ನವಾನ್ನ ಸೇವೆ ಅರ್ಪಿಸಲಾಯಿತು.
ದೇವಸ್ಥಾನದಲ್ಲಿ ನಡೆದ ಅಷ್ಟಮಂಗಲ ಪ್ರಶ್ನೆಯ ಪ್ರಕಾರ ದೇವಸ್ಥಾನಕ್ಕೆ ಸಂಬಂಧಪಟ್ಟ ಜಾಗದಲ್ಲೇ ಭತ್ತ ಬೆಳೆದು ಅದನ್ನು ದೇವರಿಗೆ ಸಮರ್ಪಿಸಬೇಕು ಎಂದು ಕಂಡು ಬಂದ ಹಿನ್ನಲೆಯಲ್ಲಿ ಈ ಬಾರಿ ದೇವಸ್ಥಾನದ ವತಿಯಿಂದಲೇ ಭತ್ತ ಬೆಳೆದು ಇಂದು ಅದನ್ನು ದೇವರಿಗೆ ಅರ್ಪಿಸಲಾಯಿತು. ಪುದ್ವಾರ್ ಎಂದು ಕರೆಯುವ ಈ ಹಬ್ಬದಲ್ಲಿ ತೆನೆಯನ್ನು ದೇವರಿಗೆ ಸಮರ್ಪಿಸಿ, ಪೂಜೆ ಮಾಡಿದ ಬಳಿಕ ಭಕ್ತರಿಗೆ ನೀಡಲಾಯಿತು.

ದಸರಾ ಹಾಗೂ ಸಾಲು-ಸಾಲು ರಜೆಗಳ ಕಾರಣ ದಕ್ಷಿಣಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯಸ್ಥಳಗಳಲ್ಲಿ ಭಕ್ತರ ದಂಡು ಹೆಚ್ಚಾಗಿದೆ. ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಸುಬ್ರಹ್ಮಣ್ಯ ದೇವರ ದರ್ಶನಕ್ಕೆ ಭಕ್ತರು ಸಾಲು ಸಾಲಾಗಿ ನಿಂತ ದೃಶ್ಯ ಕಂಡು ಬರುತ್ತಿದ್ದು, ಭಕ್ತರನ್ನು ನಿಯಂತ್ರಿಸಲು ದೇವಳದ ಸಿಬ್ಬಂದಿಗಳು ಹರ ಸಾಹಸ ಪಡುವಂತಾಗಿದೆ.