LATEST NEWS
ಗ್ರಾಮಪಂಚಾಯತ್ ಗಳಲ್ಲಿ RTC ತ್ವರಿತ ನೀಡಲು ಡಿಸಿ ಸೂಚನೆ

ಗ್ರಾಮಪಂಚಾಯತ್ ಗಳಲ್ಲಿ RTC ತ್ವರಿತ ನೀಡಲು ಡಿಸಿ ಸೂಚನೆ
ಉಡುಪಿ, ಆಗಸ್ಟ್ 28 : ಜಿಲ್ಲೆಯ ಕೆಲವು ಗ್ರಾಮ ಪಂಚಾಯತ್‍ಗಳಲ್ಲಿ ನಾಗರೀಕರಿಗೆ RTC ಪ್ರತಿ ನೀಡಲು ವಿನಾ ಕಾರಣ ವಿಳಂಭ ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಸೂಚಿಸಿದ್ದಾರೆ.
ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಂಣದಲ್ಲಿ ನಡೆದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನೆಟ್‍ವರ್ಕ್ ಸಮಸ್ಯೆ ಹಾಗೂ ಹಾಳೆಯ ಕೊರತೆಯ ನೆಪವೊಡ್ಡಿ ನಾಗರೀಕರಿಗೆ ಗ್ರಾಮ ಪಂಚಾಯತ್ ಕೇಂದ್ರಗಳಲ್ಲಿ RTC ನೀಡಲು ವಿಳಂಭಿಸಲಾಗುತ್ತಿದೆ ಎಂದು ದೂರುಗಳು ಬರುತ್ತಿವೆ. ಇದರಿಂದ ಗ್ರಾಮಾಂತರ ನಾಗರೀಕರು ತಾಲೂಕು ಕಚೇರಿಗೆ ಬಂದು ಆರ್‍ಟಿಸಿ ಪಡೆಯಬೇಕಾದ ಅನಿವಾರ್ಯತೆ ಇದೆ.
ನಾಗರೀಕರಿಗೆ ಈ ರೀತಿ ಸತಾಯಿಸುವುದುನ್ನು ಸಹಿಸಲಾಗದು. ಈ ಹಿನ್ನೆಲೆಯಲ್ಲಿ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು, ಎಲ್ಲಾ ಗ್ರಾಮ ಪಂಚಾಯತ್ ಕೇಂದ್ರಗಳಲ್ಲಿಯೇ ನಾಗರೀಕರಿಗೆ RTC ದೊರಕಲು ಮುತುವರ್ಜಿ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.