Connect with us

    LATEST NEWS

    ಸಚಿವ ಪ್ರಮೋದ್ ಮಧ್ವರಾಜ್​ರಿಂದ 193 ಕೋಟಿ ಬ್ಯಾಂಕಿಂಗ್ ವಂಚನೆ?

    ಸಚಿವ ಪ್ರಮೋದ್ ಮಧ್ವರಾಜ್​ರಿಂದ 193 ಕೋಟಿ ಬ್ಯಾಂಕಿಂಗ್ ವಂಚನೆ?

    ವಂಚನೆ ಆರೋಪ ನೂರಕ್ಕೆ ನೂರು ಸುಳ್ಳು: ಸಚಿವ ಪ್ರಮೋದ್ ಸ್ಪಷ್ಟನೆ

    ನವದೆಹಲಿ, ಮಾರ್ಚ್ 14: ಚುನಾವಣೆ ಹೊಸ್ತಿಲಲ್ಲಿ ಕ್ರೀಡಾ ಮತ್ತು ಯುವಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ಗೆ ಸಂಕಷ್ಟ ಎದುರಾಗಿದೆ. ಸಾರ್ವಜನಿಕರ ಹಣವನ್ನು ದುರುಪಯೋಗ ಪಡಿಸಿಕೊಂಡಿರುವ ಆರೋಪದಡಿಯಲ್ಲಿ ಕೇಂದ್ರ ಹಣಕಾಸು ಸಚಿವಾಲಯದ ಹಣಕಾಸು ಸೇವಾ ವಿಭಾಗದಲ್ಲಿ ಈ ಬಗ್ಗೆ ದೂರು ದಾಖಲಾಗಿದೆ.

    ಸಚಿವರಾದ ಪ್ರಮೋದ್ ಮಧ್ವರಾಜ್, ಮಲ್ಪೆಯ ಸಿಂಡಿಕೇಟ್ ಬ್ಯಾಂಕ್ ಶಾಖೆಯಲ್ಲಿ ಕೇವಲ 1.1 ಕೋಟಿ ಮೌಲ್ಯದ ಸ್ವತ್ತಿನ ದಾಖಲೆ ನೀಡಿ 193 ಕೋಟಿ ರೂಪಾಯಿ ಸಾಲ ಪಡೆದಿದ್ದಾರೆನ್ನಲಾಗಿದೆ.

    ಈ ಅಕ್ರಮದಲ್ಲಿ ಬ್ಯಾಂಕ್ ಅಧಿಕಾರಿಗಳು ಕೂಡ ಶಾಮೀಲಾಗಿದ್ದಾರೆ ಅನ್ನೋ ಆರೋಪ ಕೂಡ ಕೇಳಿಬಂದಿದೆ.

    ಮೋಸದಿಂದ ಕೋಟಿ ಕೋಟಿ ಹಣವನ್ನು ಸಾಲವಾಗಿ ಪಡೆದಿದ್ದಾರೆಂದು ವಂಚನೆ ಆರೋಪದಡಿ ಸೆಕ್ಷನ್ 120ಬಿ, 415, 420, 403 ಅಡಿಯಲ್ಲಿ ದೂರು ದಾಖಲಾಗಿದೆ.

    ವಂಚನೆ ಆರೋಪ ನೂರಕ್ಕೆ ನೂರು ಸುಳ್ಳು: ಸಚಿವ ಪ್ರಮೋದ್ ಸ್ಪಷ್ಟನೆ

    ತನ್ನ ಮೇಲಿನ ವಂಚನೆ ಆರೋಪ ನೂರಕ್ಕೆ ನೂರು ಸುಳ್ಳು ಎಂದು ಸಚಿವ ಪ್ರಮೋದ್ ಅವರು ಸ್ಪಷ್ಟನೆ ನೀಡಿದ್ದಾರೆ.

    ಉಡುಪಿಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು ಸಿಂಡಿಕೇಟ್ ಬ್ಯಾಂಕಿನಲ್ಲೇ ಈ ಬಗ್ಗೆ ಕೇಳಿ. ಬ್ಯಾಂಕಿಗೆ ಎಷ್ಟು ಆಸ್ತಿ ಇಡಬೇಕು ಅದರ ದಾಖಲೆ ಸಲ್ಲಿಸಿದ್ದೇನೆ .

    ಬ್ಯಾಂಕಿನ ಸಾಲ ನಾನು ಕೊಟ್ಟ ಆಸ್ತಿ ಮೇಲೆ ನೀಡಲಾಗಿದೆ.ಸಿಂಡಿಕೇಟ್ ಬ್ಯಾಂಕು ಕೇಂದ್ರ ಸರ್ಕಾರದ ಅಧೀನದಲ್ಲಿದೆ.

    ಯಾವ ತನಿಖೆ ನಡೆಸಬಹುದು ಇಲ್ಲಿ ಯಾವ ವಂಚನೆ ಆಗಿಲ್ಲ.ವಂಚನೆ ಮಾಡಿದ್ದರೆ ನಾನು ಸಂತೋಷದಿಂದ ತಿರುಗುತ್ತಿರಲಿಲ್ಲ.

    ಸುಳ್ಳು ಆರೋಪವನ್ನು ನಂಬುತ್ತಾರೆ ಅಂದ್ರೆ ಐ ಆಮ್ ಹೆಲ್ಪಲೆಸ್. ಮಲ್ಪೆ ಬ್ರಾಂಚ್ ನಲ್ಲಿ ನನ್ನ ಖಾತೆ ಇದೆ ಯಾರೂ ಪರೀಕ್ಷಿಸಬಹುದು ಎಂದು ಹೇಳಿದರು.

    Share Information
    Advertisement
    Click to comment

    You must be logged in to post a comment Login

    Leave a Reply