BANTWAL
ರೌಡಿಶೀಟರ್ ಕಂ ನಟ ಸುರೇಂದ್ರ ಬಂಟ್ವಾಳ್ ಬರ್ಬರ ಹತ್ಯೆ

ಬಂಟ್ವಾಳ, ಅಕ್ಟೋಬರ್ 21: ರೌಡಿ ಶೀಟರ್ ಕಂ ತುಳು ಚಿತ್ರ ನಟನ ಬರ್ಬರ ಹತ್ಯೆ ನಡೆದಿದೆ. ಬಂಟ್ವಾಳ ನಿವಾಸಿ ಸುರೇಂದ್ರ ಬಂಟ್ವಾಳ ಕೊಲೆಯಾದ ನಟನಾಗಿದ್ದು,
ಆತನ ಸ್ನೇಹಿತರೇ ಈ ಕೊಲೆ ನಡೆಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ತುಳು ಸಿನೆಮಾ ಚಾಲಿಪೋಲಿಲು ಹಾಗು ಹಲವಾರು ತುಳು ಸಿನಿಮಾಗಳಲ್ಲಿ ನಟಿಸಿರುವ ಸುರೇಂದ್ರ ಬಂಟ್ವಾಳ್ ಸವರ್ಣ ದೀರ್ಘ ಸಂಧಿ ಎನ್ನುವ ಕನ್ನಡ ಚಿತ್ರದಲ್ಲೂ ಸುರೇಂದ್ರ ನಟಿಸಿದ್ದಾರೆ. ಹಣಕಾಸು ವಿಚಾರದಲ್ಲಿ ಸ್ನೇಹಿತರೊಂದಿಗೆ ಮನಸ್ತಾಪವೇ ಈ ಕೊಲೆಗೆ ಕಾರಣ ಎನ್ನಲಾಗಿದೆ.

ಈತ 2018 ರ ಜೂನ್ ನಲ್ಲಿ ಬಂಟ್ವಾಳ ಪೇಟೆಯಲ್ಲಿ ಬಿಜೆಪಿ ಕಾರ್ಯಕರ್ತರಿಗೆ ತಲವಾರು ಝಳಪಿಸಿ ಕೊಲೆಯ ಬೆದರಿಕೆಯನ್ನೂ ಹಾಕಿದ್ದ.ಸಾರ್ವಜನಿಕವಾಗಿ ನಡೆದ ಈ ಘಟನೆಯ ಬಳಿಕ ಪೋಲೀಸರು ಅತನನ್ನು ಬಂಧಿಸಿ ಜೈಲು ಸೇರಿದ್ದ. ಇದೀಗ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ ಈತನನ್ನು ಸ್ನೇಹಿತರೇ ಕೊಂದು ಹಾಕಿದ್ಧಾರೆ. ಬಂಟ್ವಾಳ ಪೋಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ.