Connect with us

    FILM

    ಬಿಗ್​ ಬಾಸ್​ನಿಂದ ಹೊರಬಂದು ಸಾನ್ಯಾನ ತಬ್ಬಿಕೊಂಡು ಈ ವಿಚಾರ ಫಸ್ಟ್​ ಕೇಳ್ತೀನಿ’: ರೂಪೇಶ್​ ಶೆಟ್ಟಿ

    ಬೆಂಗಳೂರು: ಬಿಗ್ ಬಾಸ್ ಸೀಸನ್ ಇದೀಗ ಕೊನೆಯ ಹಂತಕ್ಕೆ ಬಂದಿದ್ದು, ಬಿಗ್ ಬಾಸ್ ರೊಮ್ಯಾಂಟಿಕ್ ಕಪಲ್ ಸಾನ್ಯಾ ಹಾಗೂ ರೂಪೇಶ್ ಶೆಟ್ಟಿ ಅವರ ವಿಚಾರ ಇದೀಗ ಮತ್ತೆ ಸುದ್ದಿಯಲ್ಲಿದೆ.


    ಬಿಗ್ ಬಾಸ್ ಸೀಸನ್ 9 ರಲ್ಲಿ ಹೆಚ್ಚು ಹೈಲೈಟ್​ ಆಗಿದ್ದು ರೂಪೇಶ್​ ಶೆಟ್ಟಿ ಮತ್ತು ಸಾನ್ಯಾ ಐಯ್ಯರ್​. ಇವರಿಬ್ಬರು ಬಿಗ್​ ಬಾಸ್​ ಒಟಿಟಿ ಶೋನಲ್ಲಿ ಮೊದಲ ಬಾರಿಗೆ ಪರಿಚಿತರಾದರು. ಬಳಿಕ ಟಿವಿ ಸೀಸನ್​ಗೂ ಜೊತೆಯಾಗಿ ಕಾಲಿಟ್ಟರು. ಅಲ್ಲಿಯೂ ಕೂಡ ತುಂಬ ಅನ್ಯೋನ್ಯವಾಗಿ ಇದ್ದರು.

    ಬಿಗ್​ ಬಾಸ್​ ಕನ್ನಡ ಸೀಸನ್​ 9’ರಲ್ಲಿ ಸಾನ್ಯಾ ಐಯ್ಯರ್​ ಅವರು ಎಲಿಮಿನೇಟ್​ ಆದಾಗ ರೂಪೇಶ್​ ಶೆಟ್ಟಿ ಅವರು ಬಿಕ್ಕಿ ಬಿಕ್ಕಿ ಅತ್ತಿದ್ದರು. ‘ದಯವಿಟ್ಟು ಬದಲಾಗಬೇಡ. ನನಗಾಗಿ ಕಾದಿರು’ ಎಂದು ಸಾನ್ಯಾ ಬಳಿ ರೂಪೇಶ್​ ಮನವಿ ಮಾಡಿಕೊಂಡಿದ್ದರು. ಈಗ ದೊಡ್ಮನೆಯ ಹೊರಗೆ ಸಾನ್ಯಾರನ್ನು ಭೇಟಿ ಮಾಡುವ ಸಮಯ ಹತ್ತಿರ ಆಗಿದೆ. ಭೇಟಿ ಆದಾಗ ತಮ್ಮ ಮೊದಲು ಮಾತು ಏನಾಗಿರಲಿದೆ ಎಂಬುದನ್ನು ಅವರು ದೊಡ್ಮನೆ ಒಳಗೆ ಹೇಳಿಕೊಂಡಿದ್ದಾರೆ.

    ‘ಮೊದಲಿಗೆ ಹೋಗಿ ತಬ್ಬಿಕೊಳ್ತೀನಿ. ಹೇಗಿದ್ದೀಯಾ ಅಂತ ಕೇಳುತ್ತೇನೆ. ಪ್ರೀತಿ ಮತ್ತು ಸ್ನೇಹಕ್ಕಿಂತಲೂ ಮುಖ್ಯವಾಗಿ ಮೊದಲಿದ್ದ ಕಾಳಜಿ ಈಗಲೂ ಇದೆಯಾ ಅಂತ ಕೇಳ್ತೀನಿ. ಯಾಕೆಂದರೆ ಈ ಮನೆಯಲ್ಲಿ ಅವರ ಜೊತೆ ಇದ್ದ ಅನುಭವ ನನಗಿದೆ. ಆದರೆ ಮನೆಯ ಹೊರಗಿನ ಅನುಭವ ಇಲ್ಲ. ಮನೆಯಲ್ಲಿ ಇದ್ದ ಭಾವನೆ ಈಗಲೂ ಹಾಗೆಯೇ ಇದೆಯಾ? ಲೈಫ್​ ಹೇಗೆಲ್ಲ ಬದಲಾಗಿದೆ? ನಾನು ನಿಮಗೆ ಈ ಮನೆಯಲ್ಲಿ ಇದ್ದಷ್ಟೇ ಮುಖ್ಯವಾ ಅಂತ ಕೇಳ್ತೀನಿ’ ಎಂದು ರೂಪೇಶ್​ ಶೆಟ್ಟಿ ಹೇಳಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *