BELTHANGADI
ಬೈಕಿಗೆ ಗುದ್ದಿದ ಲಾರಿ : ಸ್ಥಳದಲ್ಲೇ ಮೃತಪಟ್ಟ ಸೋದರರು

ಬೈಕಿಗೆ ಗುದ್ದಿದ ಲಾರಿ : ಸ್ಥಳದಲ್ಲೇ ಮೃತಪಟ್ಟ ಸೋದರರು
ಬೆಳ್ತಂಗಡಿ, ಮಾರ್ಚ್ 24 : ಬೈಕಿಗೆ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಸೋದರರಿಬ್ಬರು ಧಾರುಣವಾಗಿ ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳ್ತಂಗಡಿ ತಾಲೂಕಿನ ಉಜಿರೆ ಬಳಿಯ ಗುರಿಪಳ್ಳ ಎಂಬಲ್ಲಿ ಸಂಭವಿಸಿದೆ.
ಗುರಿಪಳ್ಳ ಕನ್ಯಾಡಿ ನಿವಾಸಿಗಳಾಗಿದ್ದ ಸೋದರರು ಹರೀಶ್ (40 ) ಮತ್ತು ಸುಧೀರ್ (38) ಬೈಕಿನಲ್ಲಿ ಮನೆ ಕಡೆಗೆ ಸಂಚರಿಸುತ್ತಿದ್ದ ಸಂದರ್ಭದಲ್ಲಿ ವೇಗವಾಗಿ ಬಂದ ಲಾರಿ ಹಿಂದಿನಿಂದ ಢಿಕ್ಕಿ ಹೊಡೆದಿದೆ.

ಪರಿಣಾಮ ಸೋದರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬೆಳ್ತಂಗಡಿ ಪೋಲಿಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.