LATEST NEWS
ಕಾಂಕ್ರಿಟ್ ರಸ್ತೆ ಅಗೆತದ ಬಗ್ಗೆ ದೂರು ಇದ್ದರೆ ಕೆಪಿಟಿಸಿಎಲ್ ಕಚೇರಿ ಸಂಪರ್ಕಿಸಿ ಎಂದ ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್

ಮಂಗಳೂರು ,ಜನವರಿ 18:-ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಬಿಜೈ, ಲಾಲ್‍ಬಾಗ್, ಎಂ.ಜಿ. ರಸ್ತೆ, ಪಿ.ವಿ.ಎಸ್ ವೃತ್ತ, ಕೆ.ಎಸ್.ರಾವ್ ರಸ್ತೆ, ಹಂಪನ್‍ಕಟ್ಟೆ ಜಂಕ್ಷನ್, ಹಂಪನಕಟ್ಟೆ ರಸ್ತೆ, ಎ.ಬಿ.ಶೆಟ್ಟಿ ವೃತ್ತ ಹಾಗೂ ಹ್ಯಾಮಿಲ್ಟನ್ ವೃತ್ತ ವರೆಗಿನ ರಸ್ತೆಯಲ್ಲಿ ಈಗಾಗಲೇ ರಸ್ತೆಯನ್ನು ಅಗೆದು ಭೂಗತ ಕೇಬಲ್ ಕಾಮಗಾರಿಯು ಕೆಪಿಟಿಸಿಎಲ್ ಇಲಾಖೆ ವತಿಯಿಂದ ನಿರ್ವಹಿಸಲಾಗುತ್ತಿದೆ.
ಕಾಮಗಾರಿಯು ಕೆಪಿಟಿಸಿಎಲ್ ಇಲಾಖೆ ವತಿಯಿಂದ ನಿರ್ವಹಣೆಯಾಗುತ್ತಿರುವುದರಿಂದ ಈ ಕಾಮಗಾರಿಯ ಬಗ್ಗೆ ಯಾವುದೇ ದೂರು ಅಥವಾ ಸಲಹೆಗಳಿದ್ದಲ್ಲಿ ಕೆಪಿಟಿಸಿಎಲ್ ಕಚೇರಿಯನ್ನು ಸಂಪರ್ಕಿಸುವಂತೆ ಸ್ಮಾರ್ಟ್‍ಸಿಟಿ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
