Connect with us

    BANTWAL

    ಬಂಟ್ವಾಳ : ಸಜಿಪಮೂಡ ಗ್ರಾಮ ಪಂಚಾಯತ್ ಸದಸ್ಯ ಹಾಜಿ ಅಬ್ದುಲ್ ಅಝೀಝ್ ನಿಧನ..!

    ಬಂಟ್ವಾಳ : ಸಜಿಪಮೂಡ ಗ್ರಾಮ ಪಂಚಾಯತ್ ಸದಸ್ಯ, ಬೊಳ್ಳಾಯಿ ನಿವಾಸಿ ಹಾಜಿ ಅಬ್ದುಲ್ ಅಝೀಝ್ ಬಿಐಬಿ (53) ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ.

    ಗುರುವಾರ ಮಧ್ಯಾಹ್ನ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ  ಚಿಕಿತ್ಸೆಗೆ ಸ್ಪಂದಿಸದೆ  ನಿಧನರಾಗಿದ್ದಾರೆ. ಬುಧವಾರ  ಏಕಾಏಕಿ ಅನಾರೋಗ್ಯ ಕಾಣಿಸಿಕೊಂಡಿದ್ದು ರಾತ್ರಿ ವೇಳೆ ಮಂಗಳೂರಿನ ಕಂಕನಾಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ಮಧ್ಯಾಹ್ನ ವೇಳೆಗೆ ನಿಧನರಾಗಿದ್ದಾರೆ. ಮೃತ ಹಾಜಿ ಅಬ್ದುಲ್ ಅಝೀಝ್ ಅವರು ಬೊಳ್ಳಾಯಿಯ ಪ್ರತಿಷ್ಠಿತ ಬಿಐಬಿ ಫ್ಯಾಮಿಲಿಯ ಸದಸ್ಯರಾಗಿದ್ದು, ಬೊಳ್ಳಾಯಿ ಬದ್ರಿಯಾ ಜುಮಾ ಮಸೀದಿಯ ಆಡಳಿತ ಕಮಿಟಿಯ ಸದಸ್ಯರೂ, ಬೊಳ್ಳಾಯಿ ಕುತುಬಿಯ್ಯತ್ ಕಮಿಟಿಯ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply