Connect with us

LATEST NEWS

ಸೋಲಿಲ್ಲದ ಸರದಾರ ಖಾದರ್ ವಿರುದ್ದ ತಾಂಟ್ರೆ ಬಾ ತಾಂಟ್‌ ಖ್ಯಾತಿಯ ರಿಯಾಝ್ ಫರಂಗಿ ಪೇಟೆ

ಮಂಗಳೂರು ಮಾರ್ಚ್ 02: ರಾಜ್ಯ ವಿಧಾನ ಸಭಾ ಚುನಾವಣೆಗೆ ದಿನ ಹತ್ತಿರ ಬರುತ್ತಿದ್ದಂತೆ ವಿವಿಧ ಪಕ್ಷಗಳಲ್ಲಿ ಅಭ್ಯರ್ಥಿಗಳ ಹುಡುಕಾಟ ಪ್ರಾರಂಭವಾಗಿದ್ದು, ದಕ್ಷಿಣಕನ್ನಡ ಜಿಲ್ಲೆಯಲ್ಲೂ ವಿವಿಧ ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳ ಘೋಷಣೆಯನ್ನು ಪ್ರಾರಂಭಿಸಿದ್ದು. ಎಸ್ ಡಿಪಿಐ ಪಕ್ಷ ಈಗಾಗಲೇ ಕರಾವಳಿಯ ಕೆಲವು ಕ್ಷೇತ್ರಗಳಿಗ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ.


ಹಿಜಾಬ್, ಆಜಾನ್, ಧರ್ಮದಂಗಲ್ ನಡುವೆ ಈ ಬಾರಿ ದಕ್ಷಿಣಕನ್ನಡ ಜಿಲ್ಲೆಯ ಉಳ್ಳಾಲ ಕ್ಷೇತ್ರ ಭಾರೀ ಕುತೂಹಲ ಮೂಡಿಸಿದೆ. ಉಳ್ಳಾಲದಲ್ಲಿ ಸೋಲಿಲ್ಲದ ಸರದಾರ ಎಂದೇ ಖ್ಯಾತಿ ಪಡೆದಿರುವ ಕಾಂಗ್ರೆಸ್ ಶಾಸಕ ಯು ಟಿ ಖಾದರ್ ಅವರನ್ನು ಕಟ್ಟಿ ಹಾಕಲು ಇತರ ಪಕ್ಷಗಳು ಸತತ ಪ್ರಯತ್ನ ನಡೆಸಿವೆ.


ಎಸ್ ಡಿಪಿಐ ಪಕ್ಷ ಉಳ್ಳಾಲ ಕ್ಷೇತ್ರಕ್ಕೆ ರಿಯಾಝ್ ಫರಂಗಿ ಪೇಟೆಯನ್ನು ಕಣಕ್ಕಿಳಿಸಿದೆ. ತಾಂಟ್ರೆ ಬಾ ತಾಂಟ್‌ ಭಾಷಣದ ಮೂಲಕ ಪ್ರಸಿದ್ಧಿಗೆ ಬಂದಿರುವ ರಿಯಾಝ್‌ ಎಸ್‌ಡಿಪಿಐ ಪಕ್ಷದ ಜನಪ್ರಿಯ ನಾಯಕ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಚಾಕಚಕ್ಯತೆ ಉಳ್ಳವರು. ಹೀಗಾಗಿ ಯು ಟಿ ಖಾದರ್ ವಿರುದ್ಧ ಎಸ್‌ಡಿಪಿಐ ಸಮರ್ಥ ಅಭ್ಯರ್ಥಿಯನ್ನೇ ಕಣಕ್ಕಿಳಿಸಿದ್ದು,ಈ ಬಾರಿ ಉಳ್ಳಾಲವನ್ನು ಕರಾವಳಿಯಲ್ಲಿ ತನ್ನ ಗೆಲುವಿಗೆ ಮೆಟ್ಟಲನ್ನಾಗಿ ಮಾಡಬಹುದೇ ಎನ್ನುವ ಪ್ರಶ್ನೆ ಎದುರಾಗಿದೆ.

ಆದರೆ ಖಾದರ್ ಮಾತ್ರ ಯಾವುದೇ ತಲೆ ಕೆಡಿಸಿಕೊಳ್ಳದೇ ತನ್ನ ಕೆಲಸ ಕಾರ್ಯಗಳನ್ನು ಯಾವುದೇ ಜಾತಿ, ಮತ, ಧರ್ಮ ಇಲ್ಲದೇ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುತ್ತಿದ್ದಾರೆ. ಒಟ್ಟಿನಲ್ಲಿ ಉಳ್ಳಾಲ ಕ್ಷೇತ್ರದ ಚುನಾವಣಾ ಕ್ಷೇತ್ರ ಮಾತ್ರ ಈ ಬಾರಿ ರೋಚಕವಾಗಿರಲಿದೆ.

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *