LATEST NEWS
ಮಂಗಳೂರಿನಲ್ಲಿ ಏರ್ ಪೋರ್ಟ್ ಸಿಬ್ಬಂದಿ ಮೇಲೆ ನೈತಿಕ ಪೊಲೀಸ್ ಗಿರಿ

ಮಂಗಳೂರಿನಲ್ಲಿ ಏರ್ ಪೋರ್ಟ್ ಸಿಬ್ಬಂದಿ ಮೇಲೆ ನೈತಿಕ ಪೊಲೀಸ್ ಗಿರಿ
ಮಂಗಳೂರು ಫೆಬ್ರವರಿ 10: ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ ನಡೆದ ಪ್ರಕರಣ ಬೆಳಕಿಗೆ ಬಂದಿದೆ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮಹಿಳಾ ಸಿಬ್ಬಂದಿಗೆ ದುಷ್ಕರ್ಮಿಗಳ ತಂಡವೊಂದು ಲೈಂಗಿಕ ಕಿರುಕುಳ ನೀಡಿದ ಘಟನೆ ವರದಿಯಾಗಿದೆ.
ನಿನ್ನೆ ತಡರಾತ್ರಿ ಮಂಗಳೂರಿನ ಮರವೂರು ಬಳಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತಡರಾತ್ರಿ ಮಹಿಳಾ ಸಿಬ್ಬಂದಿ ಇರುವ ಕಾರು ಅಡ್ಡಗಟ್ಟಿದ ಬೈಕಗಳಲ್ಲಿ ಬಂದಿದ್ದ ಏಳು ಮಂದಿ ದುಷ್ಕರ್ಮಿಗಳ ತಂಡ ಮಹಿಳೆಯ ಜೊತೆ ಅನುಚಿತವಾಗಿ ವರ್ತಿಸಿದೆ ಎಂದು ಆರೋಪಿಸಲಾಗಿದೆ. ಪರ್ಸ್ ಎಟಿಎಮ್ ಕಾರ್ಡ್ ಕಿತ್ತು ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.

ಅನ್ಯಧರ್ಮೀಯನ ಜೊತೆ ಇರುವ ಶಂಕೆಯಿಂದ ದುಷ್ಕರ್ಮಿಗಳ ತಂಡ ಕಾರು ಅಡ್ಡಗಟ್ಟಿದೆ ಎಂದು ಹೇಳಲಾಗಿದ್ದು, ನಂತರ ದುಷ್ಕರ್ಮಿಗಳ ತಂಡ ಕಾರಿಗೆ ಕಲ್ಲು ತೂರಿ ಸ್ಥಳದಿಂದ ಪರಾರಿಯಾಗಿದೆ. ಸಂತ್ರಸ್ತ ಮಹಿಳೆ ಬಜ್ಪೆ ಠಾಣೆಯಲ್ಲಿ ದೂರು ನೀಡಿದ್ದಾರೆ.