KARNATAKA
ಅನ್ಲಾಕ್ ಆದ ಕೊಡಗು ಜಿಲ್ಲೆ..ಹೋಮ್ ಸ್ಟೇ, ರೆಸಾರ್ಟ್ ಓಪನ್
ಕೊಡಗು ಜುಲೈ 9: ಕೊರೊನಾ ಪ್ರಕರಣಗಳು ಇಳಿಮುಖವಾದ ಹಿನ್ನಲೆ ಕೊಡಗು ಜಿಲ್ಲೆಯಲ್ಲಿ ಇಂದಿನಿಂದ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದ್ದು, ಅನ್ಲಾಕ್ 3.0ದ ಎಲ್ಲಾ ಮಾರ್ಗಸೂಚಿಗಳು ಈಗ ಕೊಡಗು ಜಿಲ್ಲೆಗೂ ಅನ್ವಯವಾಗಲಿದೆ.
ಜುಲೈ3 ರಂದು ಸಭೆ ನಡೆಸಿದ್ದ ರಾಜ್ಯ ಸರ್ಕಾರ ಕೊಡಗು ಜಿಲ್ಲೆ ಹೊರತುಪಡಿಸಿ ರಾಜ್ಯಾದ್ಯಂತ 3.0 ಅನ್‌ಲಾಕ್ ನಿಯಮಗಳನ್ನು ಜಾರಿಗೊಳಿಸಿತ್ತು. ಇದರಂತೆ ಎಲ್ಲಾ ಸರ್ಕಾರಿ, ಖಾಸಗಿ ಕಚೇರಿ, ಕಾರ್ಖಾನೆಗಳು, ವಾಣಿಜ್ಯ ಚಟುವಟಿಕೆಗೆ ಶೇ.100ರಷ್ಟು ಮುಕ್ತ ಅವಕಾಶ ನೀಡಲಾಗಿತ್ತು. ಅಲ್ಲದೆ, ಬೆಳಗ್ಗೆ 5 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ಎಲ್ಲಾ ರೀತಿಯ ವಹಿವಾಟಿಗೂ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಕೊಡಗು ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಶೇ. 6.5 ರಷ್ಟು ಇದೆ ಎಂಬ ಕಾರಣ ನೀಡಿ ಅನ್‌ಲಾಕ್ 2. 0 ನಿಯಮಗಳನ್ನೇ ಮುಂದುವರೆಸಲಾಗಿತ್ತು.
ಸೋಂಕು ಕಡಿಮೆಯಾಗದ ಹಿನ್ನಲೆ ರಾಜ್ಯದೆಲ್ಲೆಡೆ ಲಾಕ್ಡೌನ್ ತೆರವು ಮಾಡಿದರೂ ಕೊಡಗು ಜಿಲ್ಲೆಯಲ್ಲಿ ಮಾತ್ರ ನಿರ್ಬಂಧ ಮುಂದುವರೆಸಲಾಗಿತ್ತು. ಪ್ರವಾಸೋದ್ಯಮವೇ ಮೂಲ ಆದಾಯವಾಗಿರುವ ಕೊಡಗಿನಲ್ಲಿ ಲಾಕ್ಡೌನ್ನಿಂದಾಗಿ ಸಾಕಷ್ಟು ನಷ್ಟ ಉಂಟಾಗಿದೆ.
ಸೋಂಕು ಇಳಿಕೆಯಾದ ಹಿನ್ನೆಲೆಯಲ್ಲಿ ಇದೀಗ ರಾಜ್ಯ ಸರ್ಕಾರ ಜುಲೈ 19ರ ತನಕ ವಿನಾಯಿತಿ ನೀಡಿ ಅಧಿಕೃತ ಆದೇಶ ಹೊರಡಿಸಿದೆ. ಇದರಂತೆ ಜಿಲ್ಲೆಯಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳುವ ನಿರೀಕ್ಷೆಯಿದೆ. ಈ ನಡುವೆ ಜಿಲ್ಲಾಡಳಿತದಿಂದ ಶುಕ್ರವಾರ ಮಾರ್ಗಸೂಚಿ ಪ್ರಕಟವಾಗುವ ಸಾಧ್ಯತೆಯಿದೆ..