Connect with us

    LATEST NEWS

    ಕರಾವಳಿಯಲ್ಲಿ ಚುರುಕು ಪಡೆದ ಮಳೆ..ನಾಲ್ಕು ದಿನ ಭಾರಿ ಮಳೆ ಸಾಧ್ಯತೆ

    ಮಂಗಳೂರು ಜುಲೈ 09: ಕರಾವಳಿಯಲ್ಲಿ ಕಳೆದ ಕೆಲವು ದಿನಗಳಿಂದ ಬಿಡುವು ಪಡೆದಿದ್ದ ಮಳೆ, ಇಂದು ಮುಂಜಾನೆಯಿಂದಲೇ ಸುರಿಯಲಾರಂಭಿಸಿದೆ.


    ಇಂದು ಬೆಳಿಗ್ಗಿನಿಂದಲೇ ಉತ್ತಮ ಮಳೆ ಆರಂಭಗೊಂಡಿದ್ದು, ದಟ್ಟ ಮೋಡ ಕವಿದು ಮಳೆಯೊಂದಿಗೆ ಗುಡುಗು ಸಿಡಿಲಿನ ಅಬ್ಬರವೂ ಇತ್ತು. ಜೂನ್ ತಿಂಗಳ ಪ್ರಾರಂಭದಲ್ಲಿ ಮಳೆ ಬಂದಿದ್ದು ಬಿಟ್ಟರೆ ನಂತರ ಮಳೆ ಸಂಪೂರ್ಣ ಮಾಯವಾಗಿತ್ತು. ಪರಿಣಾಮ ಭತ್ತ ಬೆಳೆಯವ ರೈತರು ಕಂಗಾಲಾಗಿದ್ದರು.


    ಇದೀಗ ಮತ್ತೆ ಮಳೆ ಪ್ರಾರಂಭವಾಗಿದ್ದು, ಜುಲೈ 9 ರಿಂದ 4 ದಿನಗಳ ಕಾಲ ಕರಾವಳಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.

    Share Information
    Advertisement
    Click to comment

    You must be logged in to post a comment Login

    Leave a Reply