LATEST NEWS
ಚೀನಾದಲ್ಲಿ ಕೋವಿಡ್ ಮಾದರಿಯ ಮತ್ತೊಂದು ವೈರಸ್
ಬೀಜಿಂಗ್ ಜನವರಿ 03: ಕೊರೊನಾ ವೈರಸ್ ನ್ನು ಜಗತ್ತಿಗೆ ಹರಡಿದ್ದ ಚೀನಾದಲ್ಲಿ ಇದೀಗ ಮತ್ತೊಂದು ವೈರಸ್ ಆತಂಕ ಎದುರಾಗಿದೆ. ಚೀನಾದಲ್ಲಿ ಹ್ಯೂಮನ್ ಮೆಟಾಪ್ನ್ಯೂಮೊವೈರಸ್ ಕಾಣಿಸಿಕೊಂಡಿರುವ ಹೊಸ ವೈರಾಣು ಆಗಿದ್ದು, ನೆರೆಯ ರಾಷ್ಟ್ರ ಮತ್ತೊಮ್ಮೆ ಹೊಸ ವೈರಾಣುವಿನಿಂದ ಪಾರಾಗಲು ಸ್ಕ್ರೀನಿಂಗ್, ಪತ್ತೆ ಮತ್ತು ಪ್ರತ್ಯೇಕತೆಯ ಪ್ರೋಟೋಕಾಲ್‌ಗಳ ಮೊರೆ ಹೋಗಿದೆ.
ಚೀನಾದಲ್ಲಿ HMPVಯ ವೈರಾಣು ಸೋಂಕು ಪ್ರಕರಣಗಳು ಹೆಚ್ಚುತ್ತಿದ್ದು ವಿಶೇಷವಾಗಿ ಉತ್ತರ ಪ್ರಾಂತ್ಯಗಳಲ್ಲಿ 14 ವರ್ಷದೊಳಗಿನವರನ್ನು ಈ ವೈರಾಣು ಹೆಚ್ಚು ಬಾಧಿಸುತ್ತಿದೆ ಎಂದು ಅಧಿಕಾರಿಗಳು ಹೇಳಿರುವುದನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.
ರಾಯಿಟರ್ಸ್ ಪ್ರಕಾರ, ಚೀನಾದಲ್ಲಿ ಎಚ್‌ಎಂಪಿವಿ ಪ್ರಕರಣಗಳು ಹೆಚ್ಚಾಗಿ ವರದಿಯಾಗಿವೆ ಮತ್ತು ರೈನೋವೈರಸ್‌ನಂತಹ ಇತರ ಸಾಂಕ್ರಾಮಿಕ ರೋಗಗಳನ್ನು ಹರಡುವ ಅಪಾಯದಲ್ಲಿದೆ. ವೈರಸ್ ಎಲ್ಲಾ ವಯಸ್ಸಿನ ಜನರಲ್ಲಿ ಉಸಿರಾಟದ ಕಾಯಿಲೆಗಳನ್ನು ಉಂಟುಮಾಡಬಹುದು. ಆದಾಗ್ಯೂ, ಚಿಕ್ಕ ಮಕ್ಕಳು, ಹಿರಿಯ ವಯಸ್ಕರು ಮತ್ತು ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ಜನರು ವಿಶೇಷವಾಗಿ ಈ ರೋಗಕ್ಕೆ ಬೇಗ ಗುರಿಯಾಗುತ್ತಾರೆ. HMPV ವೈರಾಣುವನ್ನು 2001 ರಲ್ಲಿ ಮೊದಲ ಬಾರಿಗೆ ಪತ್ತೆ ಮಾಡಲಾಗಿತ್ತು.
ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಪ್ರಕಾರ, ವೈರಸ್ ರೋಗಲಕ್ಷಣಗಳು ಚಳಿಗಾಲದಲ್ಲಿ ಸಾಮಾನ್ಯವಾದ ಇತರ ವೈರಲ್ ಸೋಂಕುಗಳಂತೆಯೇ ಇರುತ್ತವೆ.