KARNATAKA
ಕೊಟ್ಟಾಯಂ – ಶಬರಿಮಲೆ ಅಯ್ಯಪ್ಪ ಮಾಲಾಧಾರಿಗಳಿದ್ದ ಬಸ್ ಪಲ್ಟಿ – ಚಾಲಕ ಸಾವು
![](https://i0.wp.com/themangaloremirror.in/wp-content/uploads/2024/04/For-Advertisement-Please-Contact-1.jpg?fit=728%2C90&ssl=1)
ಕೊಟ್ಟಾಯಂ ಜನವರಿ 03: ಹೈದರಾಬಾದ್ ನಿಂದ ಶಬರಿಮಲೆಗೆ ತೆರಳುತ್ತಿದ್ದ ಬಸ್ ಪಲ್ಟಿಯಾದ ಘಟನೆ ಕೇರಳದ ಕೊಟ್ಟಾಯಂನ ಕನ್ಮಲಾ ಅಟ್ಟಿವಾಲಂ ಬಳಿಯ ಘಾಟ್ ರಸ್ತೆಯಲ್ಲಿ ನಡೆದಿದೆ. ಅಪಘಾತದಲ್ಲಿ ಚಾಲಕ ಸಾವನಪ್ಪಿದ್ದಾನೆ.
ಕೊಟ್ಟಾಯಂನಿಂದ ಶಬರಿಮಲೆ ಕಡೆಗೆ ಹೋಗುತ್ತಿದ್ದ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪಂಬಾ ನದಿಯಿಂದ ಸುಮಾರು 15 ಕಿ.ಮೀ ದೂರದ ರಸ್ತೆಯಲ್ಲಿ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
![](https://i0.wp.com/themangaloremirror.in/wp-content/uploads/2024/06/IMG-20240626-WA0023.jpg?fit=1280%2C670&ssl=1)
ಅಪಘಾತದಲ್ಲಿ ಬಸ್ ಚಾಲಕ ರಾಜು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಬಸ್ನಲ್ಲಿ ಒಟ್ಟು 30 ಮಂದಿ ಪ್ರಯಾಣಿಕರು ಅಯ್ಯಪ್ಪ ದರ್ಶನಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಈ 30 ಪ್ರಯಾಣಿಕರಲ್ಲಿ 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, 22 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ. ಮೃತರ ಚಾಲಕನನ್ನು ಸೈದಾಬಾದ್ ನಿವಾಸಿ ಎಂದು ಗುರುತಿಸಲಾಗಿದೆ. ಅದೃಷ್ಟವಶಾತ್ ಬಸ್ ಅವಘಡ ಸಂಭವಿಸಿದ ಜಾಗದಲ್ಲಿ ಮರಗಳಿದ್ದ ಕಾರಣ ಅಪಘಾತದ ತೀವ್ರತೆ ಕಡಿಮೆಯಾಗಿದೆ. ಮೇಲಾಗಿ, ಮರಗಳು ಬಸ್ ಅನ್ನು ಕಣಿವೆಗೆ ಬೀಳದಂತೆ ರಕ್ಷಿಸಿದವು. ಇದರೊಂದಿಗೆ ಮರಗಳು ಭಾರೀ ದುರಂತವನ್ನು ತಪ್ಪಿಸಿವೆ. ಗಾಯಾಳುಗಳನ್ನು ತಕ್ಷಣ ವೈದ್ಯಕೀಯ ಚಿಕಿತ್ಸೆಗಾಗಿ ಕೊಟ್ಟಾಯಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ